K2kannadanews.in
CM visit Raichur ರಾಯಚೂರು : ಸಿಂಧನೂರು ದಸರಾ ಸಭಾ ಮತ್ತು ಗೋಕಾಕ್ ಚಳುವಳಿ 40ರ ಸಂಭ್ರಮ ಕಾರ್ಯಕ್ರಮ ನಿಮಿತ್ಯ ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ಕಾಲ ರಾಯಚೂರಿಗೆ ಆಗಮಿಸಲಿದ್ದರೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.4ರಂದು ಮೈಸೂರು ದಸರಾ ಮಾದರಿಯಲ್ಲಿ ಪ್ರಪ್ರಥಮ ಭಾರಿಗೆ ಸಿಂಧನೂರು ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ದಿನಗಳ ಕಾಲ ಮಾಡುತ್ತಿದ್ದ ಈ ಒಂದು ಕಾರ್ಯಕ್ರಮವನ್ನು ಈ ವರ್ಷದಿಂಸದ 9 ದಿನಗಳ ದಸರಾ ಉತ್ಸವ ಕಾರ್ಯಕ್ರಮ ಅತ್ಯಂತ ವೈಭವದಿಂದ ನಿರ್ವಹಿಸಲಾಗುತ್ತಿದೆ. ಸಿಂಧನೂರು ದಸರಾ ಉತ್ಸವ ಕಾರ್ಯಕ್ರಮವನ್ನು ಸುಮಾರು 1.5 ಕೋಟಿ ಅದೇ ರೀತಿ ಗೋಕಾಕ್ ಚಳುವಳಿಗೆ ಒಂದು ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಿರ್ವಹಿಸಲಾಗುತ್ತದೆ ಎಂದರು.
ಸೆ.5 ರಂದು ನಡೆಯುವ ಗೋಕಾಕ್ ಚಳುವಳಿ 40 ವರ್ಷದ ಸಂಭ್ರಮ ಕಾರ್ಯಕ್ರಮವನ್ನು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮೆರವಣಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಚಾಲನೆ ನೀಡಲಿದ್ದು, ನಗರದ ಬಸವೇಶ್ವರ ವೃತ್ತದಿಂದ ಸುಮಾರು 200 ಕಲಾ ತಂಡಗಳಿಂದ ಕೃಷಿ ವಿಶ್ವವಿದ್ಯಾಲಯದವರೆಗೆ ಮೆರವಣಿಗೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ನಂತರ ಮಾನ್ವಿ ಪಟ್ಟಣದಲ್ಲಿ 1635 ಕೋಟಿ ವೆಚ್ಚದ ಸಿಂಧನೂರು-ಕಲ್ಮಲಾ ಜಂಕ್ಷನ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಿಎಂ ನೆರವೇರಿಸುವರು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ಪಿ ಎಸ್.ಪುಟ್ಟಮಾದಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡವೆ ಉಪಸ್ಥಿತರಿದ್ದರು.