K2kannadanews.in
Crime News ರಾಯಚೂರು : ಪಹಲ್ಗಾಮ್ ದಾಳಿ ದೇಶದಲ್ಲಿಯೇ ಒಂದು ರೀತಿಯ ಸಂಚಲನವನ್ನ ಮೂಡಿಸಿತ್ತು, ಆ ಒಂದು ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಸ್ಪೀಕರ್ ಸಿಎಂ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬಂದಿದ್ದು, ಸಿಬ್ಬಂದಿಗಳು ಆತಂಕದಲ್ಲಿಯೇ ಕಚೇರಿ ಬಿಟ್ಟು ಹೊರಗೆ ಹೋಗಿದ್ದಾರೆ. ಏನಿದು ಬೆದರಿಕೆ ಕರೆಗಳು ಎಲ್ಲೆಲ್ಲಿ ಏನಾಯ್ತು ಇಲ್ಲಿದೆ ಡಿಟೇಲ್ಸ್.
ಹೌದು ಕೆಲ ದಿನಗಳಲ್ಲಿ ಹಿಂದಷ್ಟೇ ಕಾಶ್ಮೀರದ ಪಹಲ್ಗಾಮ್ ದಾಳಿಯಿಂದ 28ಕ್ಕೂ ಹೆಚ್ಚು ಜನ ಮೃತಪಟ್ಟು ದೇಶದಲ್ಲಿ ಆ ಒಂದು ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಅಷ್ಟರಲ್ಲಾಗಲಿ ಇಂದು ರಾಜ್ಯದಲ್ಲಿ ವಿವಿಧಡೆ ಬಾಂಬ್ ಮತ್ತು ಜೀವ ಬೆದರಿಕೆ ಕರೆ ಮತ್ತು ಸಂದೇಶಗಳು ಬಂದ್ದು ಒಂದಷ್ಟು ಆತಂಕಕಾರಿ ಬೆಳವಣಿಗೆ ಆಗಿದೆ. ಇಂದು ಬೆಳಿಗ್ಗೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಮಾತನಾಡಿದ ಅವರು ಅಂಡರ್ ವರ್ಲ್ಡ್ ನಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅಂಡರ್ ವರ್ಲ್ಡ್ ಸೇರಿ ಕೆಲವು ಕಡೆಗಳಿಂದ ಕರೆಗಳು ಬಂದಿವೆ. ಈ ಹಿಂದೆಯೂ ಕೆಲವು ಬಾರಿ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ನನಗಾಗಿ ಮಂಗಳೂರಿನಲ್ಲಿ ಎನ್‌ಐಎ ಸ್ಥಾಪಿಸುವುದು ಬೇಡ. ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ. ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂಬುದನ್ನು ಆ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ಮಾಡಿಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನೂ ಇಲ್ಲ ಈಗ ಮಾತನಾಡುತ್ತಿದ್ದೇನೆ. ಮರಳಿ ಮತ್ತೆ ಹೋಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ಇಂದು ಬೆಳಿಗ್ಗೆ DEO ಮೇಲ್ ಗೆ ಒಂದು ಸಂದೇಶ ಬಂದಿದೆ. DEO ರಾಯಚೂರು ಕಚೇರಿಯು ವಿನಾಶಕಾರಿ ಪೈಪ್ ಬಾಂಬ್ ಸ್ಫೋಟಕ್ಕೆ ಬಲಿಯಾಗಲಿದೆ ಎಂಬ ಮೆಸೆಜ್ ಬಂದಿದ್ದು, ಇದನ್ನು ನೋಡಿ ಗಾಬರಿಗೊಂಡ ಅಲೆನಾಥ್ ಸಿಬ್ಬಂದಿಗಳು ಕಚೇರಿಯಿಂದ ಹೊರ ಬಂದಿದ್ದಾರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊಡಲು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕದ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಇಡೀ ಜಿಲ್ಲಾಧಿಕಾರಿ ಕಚೇರಿ ಸುತ್ತುವರೆದು ಶೋಧಕಾರ್ಯ ನಡೆಸಿವೆ. ಸ್ಥಳಕ್ಕೆ ಆಗಮಿಸಿದ ಎಸಿ ಅವರು ನಮಗೆ ಮೇಲ್ ಬಂದಿದೆ. ಆ ಹಿನ್ನಲೆಯಲ್ಲಿ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ಕಳಿಸಿ ತಪಾಸಣೆ ಕಾರ್ಯ ನಡೆಸಲಾಯಿತು.
ಇನ್ನೂ ಮೈಸೂರು, ಚಾಮರಾಜನಗರ ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಇ-ಮೇಲ್ ಇಂದು ಬೆಳಗ್ಗೆ ಜಿಲ್ಲಾಧಿಕಾರಿಗೆ ಬಂದಿದ್ದು, ಇಲ್ಲಿ ತಮಿಳುನಾಡಿನ ಬಾಂಬ್ ಬ್ಲಾಸ್ ಪ್ರಕರಣಗಳನ್ನು ಉಲ್ಲೇಖಿಸಿ ಮೇಲ್ ಸಂದೇಶ ರವಾನೆ ಮಾಡಲಾಗಿದ್ದು, ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿ ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಪೈಪ್ ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್ ಗಳು ಸ್ಫೋಟಗೊಳಿಸುವಾದಿ ಅಪರಿಚಿತ ಸಂದೇಶ ರವಾನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿ, ಬಾಂಬ್ ಪತ್ತೆ ದಳ ಮತ್ತು ಶ್ವಾನದಳವು ಜಿಲ್ಲಾಡಳಿತ ಭವನವನ್ನು ಜಾಲಾಡುತ್ತಿದ್ದು ಶೋಧ ಕಾರ್ಯ ನಡೆಸಿದ್ದಾರೆ.
ಇನ್ನು ಬೆಳಗ್ಗೆಯಿಂದ ನಡೆಯುತ್ತಿರುವ ಬೋಮ್ ಕರೆಗಳ ಒಂದು ಘಟನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸ್ಪೀಕರ್ ಯ.ಟಿ.ಖಾದರ್‌ಗೆ ಬೆದರಿಕೆ ಕರೆ ಬಂದ ವಿಚಾರ ಗಮನಕ್ಕೆ ಬಂದಿದೆ. ನನಗೂ ಬೆದರಿಕೆ ಕರೆಗಳು ಬರುತ್ತವೆ, ಬಂದಿವೆ. ಇನ್ನೂ ಸ್ಪೀಕರ್‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಅದೇನೇ ಇರಲಿ ಕಾಶ್ಮೀರದ ಪಹಲ್ಗಾಮ್ ದಾಳಿ ನಂತರ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಸಂದೇಶ ಕಳಿಸಿದ್ದು ಅಲ್ಲದೆ ಅಂತ್ಯದಲ್ಲಿ ಅಲ್ಲಾಹು ಅಕ್ಬರ್ ಎಂದು ಬರೆದಿರುವುದು ಆಂತರಿಕವಾಗಿ ದೇಶದಲ್ಲಿ ಏನಾದರೂ ಮಸಲತ್ತು ನಡೆದಿದೆಯಾ ಎಂಬ ಅನುಮಾನಗಳು ಆರಂಭವಾಗುತ್ತಿವೆ. ಏನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಂದೇಶಗಳು ಎಲ್ಲಿಂದ ಬಂದಿದೆ, ಬೆದರಿಕೆ ಕರೆಗಳು ಯಾರು ಮಾಡಿದ್ದಾರೆ ಎಂಬದು ಪತ್ತೆ ಹಚ್ಚುವ ಮೂಲಕ ನಿಟ್ಟಿಸಿರುವ ಬಿಡುವಂತೆ ಮಾಡಬೇಕಿದೆ.