K2kannadanews.in
Cloudy weather ರಾಯಚೂರು : ಕಳೆದ ಒಂದು ವಾರದಿಂದ ಬಿಸಿಲು ಮತ್ತು ಧಗೆಯಿಂದ ಬೇಸತ್ತಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದ್ದರೂ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಚಳಿಗಾಲದಲ್ಲಿದ್ದೆವು ಅಥವಾ ಬೇಸಿಗೆಯಲ್ಲಿದ್ದೆವು ಎಂಬಷ್ಟರ ಮಟ್ಟಿಗೆ ಬಿಸಿಲಿನ ಹೊಡೆತ ಆರಂಭವಾಗಿತ್ತು. ರಾತ್ರಿ ವೇಳೆ ವಾತಾವರಣ ಬದಲಾಗಿದ್ದು, ಬೆಳಗಿನ ಜಾವದಿಂದಲೂ ಚೀಟಿ ಜಿಟಿ ಮಳೆ ಶುರುವಾಗಿದ್ದು ಮೋಡಕವಿದ ವಾತಾವರಣವಿದೆ. ಬದಲಾದ ವಾತಾವರಣದಿಂದ ಜಿಲ್ಲೆಯ ಜನರು ಕೂಲ್ ಆಗಿದ್ದಾರೆ.