
ಸಿಂಧನೂರು : ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಚಾರಕ್ಕೆ ಮುಸ್ಲಿಂ ಯುವಕನೊಬ್ಬ ದೇವಾಲಯ ಟ್ರಯಾಂಗಣದಲ್ಲಿ ನಡೆದಿದ್ದು ಪರಿಸ್ಥಿತಿ ಟೈಮ್ ಇರದಂತೆ ಪೊಲೀಸರು ಯುವಕನ ಜೊಟ್ಟು ಹಿಡಿದು ಹೊರಹಾಕಿದಾಗ ಘಟನೆ ಬಂಗಾಳಿ ಕ್ಯಾಂಪಿನಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಂಗಾಳಿ ಕ್ಯಾಂಪ್ 2ರಲ್ಲಿ ಇದೇ ವಿಚಾರಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಯುವತಿ ಹೆಸರಿನ ಖಾತೆ ಮೂಲಕ ಅಲ್ಲಾ ಹಾಗೂ ಇಸ್ಲಾಂ ಬಗ್ಗೆ ವಿವಾದಾತ್ಮಕ ಪೋಸ್ಟ್‌ವೊಂದು ಹಾಕಿದ್ದಾಗಿ ಆರೋಪವೊಂದು ಕೇಳಿ ಬಂದಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ. ಈ ಬಗ್ಗೆ ವಿಚಾರಿಸಲು ಮುಸ್ಲಿಂ ಯುವಕರ ಗುಂಪು ಕ್ಯಾಂಪ್‌ಗೆ ಬಂದಿದ್ದು, ಈ ವೇಳೆ ಎರಡೂ ಕೋಮಿನ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಅನ್ಯ ಕೋಮಿನವರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಂಧನೂರು ಪಟ್ಟಣದಿಂದ 50ಕ್ಕೂ ಹೆಚ್ಚು ಯುವಕರು ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸಿ ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದಾರೆ. ಇದೇ ವೇಳೆ ಅಕ್ರಮವಾಗಿ ಹಿಂದೂ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಹಿಂದೂ ದೇವಸ್ಥಾನಕ್ಕೆ ಪ್ರವೇಶಿಸಿದ ಮುಸ್ಲಿಂ ಯುವಕ ಹೈಡ್ರಾಮಾ ಸೃಷ್ಟಿಸಿದ್ದಾನೆ. ಇದಕ್ಕೆ ಗ್ರಾಮಸ್ಥರೆಲ್ಲರೂ ಕೆಂಡಕಾರಿದ್ದು, ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ದುರ್ಗಾದೇವಿ ದೇಗುಲದ ಪ್ರಾಂಗಣದಲ್ಲಿ ಮಲಗಿದ್ದ ಯುವಕನ ತಲೆಯ ಜುಟ್ಟು ಹಿಡಿದು ಹೊರ ಹಾಕಿದರು. ಈ ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ಶಾಮೀದ್, ತಾಜುದ್ದೀನ್, ಸಮೀರ್ ಎಂಬುವವರ ಬಂಧನವಾಗಿದ್ದು, 30ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಬಂಗಾಳಿ ಕ್ಯಾಂಪ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
![]() |
![]() |
![]() |
![]() |
![]() |
[ays_poll id=3]