ದರ್ವೇಶ್ ಕಂಪನಿ ಮಾಲಿಕ ಸಜಾ ಹುಬ್ಬಳ್ಳಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ..

K 2 Kannada News
ದರ್ವೇಶ್ ಕಂಪನಿ ಮಾಲಿಕ ಸಜಾ ಹುಬ್ಬಳ್ಳಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ..
WhatsApp Group Join Now
Telegram Group Join Now

K2kannadanews.in

Darvesh company ಹುಬ್ಬಳ್ಳಿ : ನೂರಾರು ಜನರಿಗೆ ಟ್ರೇಡಿಂಗ್ (trading) ಹೆಸರಿನಲ್ಲಿ ಹೆಚ್ಚಿನ ಬಡ್ಡಿ (Interest) ಆಸೆ ತೋರಿಸಿ ನೂರಾರು ಕೋಟಿ ವಂಚನೆ ಆರೋಪ ಹೊತ್ತ ದರ್ವೇಶ್‌ ಗ್ರೂಪ್‌ನ (Darvesh) ಮಾಲಿಕ ಮಹಮ್ಮದ್ ಹುಸೇನ್ ಸುಜಾ ಮನೆ ಮೇಲೆ ಹುಬ್ಬಳ್ಳಿಯಲ್ಲಿ (Hubballi) ಸಿಐಡಿ ಅಧಿಕಾರಿಗಳ ದಾಳಿ ನಡೆಸಿ ತನಿಖೆ ಮಾಡಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ (Accused) ಮೊಹಮ್ಮದ್ ಸುಜಾ ಮೇಲೆ ಕಳೆದ ಶನಿವಾರ ದಾಳಿ (attack) ನಡೆಸಿದ್ದು, ಮನೆಯಲ್ಲಿ ಸಿಐಡಿ ಅಧಿಕಾರಿಗಳು (CID officers) ಶೋಧ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಐದು ಜನ ಆರೋಪಿಗಳ ಬಂಧಿಸಿರುವ ಸಿಐಡಿ ಅಧಿಕಾರಿಗಳು, ಈಗ ಪ್ರಮುಖ ಆರೋಪಿ ಪತ್ತೆಗೆ ದಾಳಿ ನಡೆಸಿದ್ದಾರೆ.

ಹೂಡಿಕೆ ಹೆಸರಿನಲ್ಲಿ ಬಾಂಡ್‌ಗಳನ್ನ ನೀಡಿ ವಂಚಿಸಿರುವ ಪ್ರಕರಣದಲ್ಲಿ ದರ್ವೇಶಿ ಎಂಬ ಕಂಪನಿ ಆರಂಬಿಸಿದ್ದರು, ಹೂಡಿಕೆ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ವಂಚನೆ ಮಾಡಿದ್ದರು. ಹಣ ಕಳೆದುಕೊಂಡು ನೂರಾರು ಜನರಿಂದ ಅಸಮಧಾನ ವ್ಯಕ್ತವಾಗಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಸರಕಾರ ಸಿಐಡಿ ಗೆ ವಹಿಸಿತ್ತು, ರಾಯಚೂರು ನಗರದಲ್ಲಿ ನಡೆದಿರುವ ಬಹು ಕೋಟಿ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿನ ಸುಜಾ ಮನೆ ಮೇಲೆ ದಾಳಿ ನಡೆಸಿದ್ದಾರೆ.

source : public next…

WhatsApp Group Join Now
Telegram Group Join Now
Share This Article