ಫಸಲ್ ಭೀಮಾ ಹೆಸರಿನಲ್ಲಿ ರೈತರಿಗೆ ಅನ್ಯಾಯ ಮಾಡಿದ್ದ ಇಬ್ಬರನ್ನು ಬಂದಿಸಿದ ಸಿಐಡಿ..

K 2 Kannada News
ಫಸಲ್ ಭೀಮಾ ಹೆಸರಿನಲ್ಲಿ ರೈತರಿಗೆ ಅನ್ಯಾಯ ಮಾಡಿದ್ದ ಇಬ್ಬರನ್ನು ಬಂದಿಸಿದ ಸಿಐಡಿ..
WhatsApp Group Join Now
Telegram Group Join Now

K2kannadanews.in

PMFBY SCAM ರಾಯಚೂರು : ಪ್ರಧಾನ ಮಂತ್ರಿ (Pradhan mantri) ಫಸಲ್ ಭಿಮಾ ಯೋಜನೆ (Fasal bhima yojan) ಹೆಸರಿನಲ್ಲಿ ರೈತರಿಗೆ (Farmers) ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಪೊಲೀಸರು ಶುಕ್ರವಾರ (Friday) ಇಬ್ಬರನ್ನು ಬಂಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ ಘಟನೆ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲ್ಲೂಕಿನ ವ್ಯಾಪ್ತಿಯ ಹಳ್ಳಿ (Village) ಹೊಸೂರು, ಮಾಡಗಿರಿ ಗ್ರಾಮದ ನೂರಾರು ರೈತರ ಬೆಳೆ ವಿಮೆಯ (Crop lone) ಪಾವತಿಸಿದ್ದರು. ಆದರೇ ಪರಿಹಾರದ ಹಣ ಮಾತ್ರ ಜಮೀನು (Land) ಇಲ್ಲದ ಮತ್ತು ವಿಮೆ ಕಟ್ಟದವರ ಖಾತೆಗೆ ಜಮಾ ಆಗಿದ್ದವು. ಈ ಪ್ರಕರಣಕ್ಕೆ ಸಂಭಂದ ಸಿಐಡಿ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ )Arrested) ಮಾನ್ವಿ ತಾಲ್ಲೂಕು ನ್ಯಾಯಾಲಯಕ್ಕೆ (Manvi court) ಹಾಜರುಪಡಿಸಿ, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಸಿಐಡಿಯ ಪಿಎಸ್‌ಐ (Psi) ಕಿರಣ ಅವರ ನೇತೃತ್ವದ ಎಂಟು ಜನರ ತಂಡ ಸಿರವಾರ ತಾಲ್ಲೂಕಿನ ಮಾಡಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಯ್ಯ, ಕಂಪ್ಯೂಟರ್ ಆಪರೇಟರ್ ಆಗಿದ್ದ ಅಕ್ಷಯ ಕುಮಾರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಸಿರವಾರ ಮತ್ತು ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಎಕರೆ ಪ್ರದೇಶದ ರೈತರು ಬೆಳೆ ವಿಮೆ ನಿಂದಾಯಿಸಿಕೊಂಡಿದ್ದರು. ಆದರೆ, ವಿಮೆ ಪರಿಹಾರದ ಹಣವು ಇತರರ ಬ್ಯಾಂಕ್ (Bank) ಖಾತೆಗೆ ಜಮೆ ಮಾಡಲಾಗಿತ್ತು.

ಈ ಬಗ್ಗೆ ಕಳೆದ 8 ತಿಂಗಳ ಹಿಂದೆ ಸಿರವಾರ ಪೊಲೀಸ್ ಠಾಣೆಯಲ್ಲಿ (Police station) ಪ್ರಕರಣ (FIR) ದಾಖಲಾಗಿತ್ತು. ಜಿಲ್ಲೆಯಲ್ಲಿ ರೈತರ ಹೋರಾಟ ಮತ್ತು ಒತ್ತಡ ಹಾಕಿದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಗೊಂಡಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡು, ಮಾಹಿತಿ ಸಂಗ್ರಹಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Share This Article