This is the title of the web page
This is the title of the web page
Politics News

ಮತದಾನದ ದಿನ ಯಾವ ದಾಖಲೆ ತೋರಿಸಬೇಕು..? ಈ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ


K2 ಪೊಲಿಟಿಕಲ್ ನ್ಯೂಸ್ : 2023 ವಿಧಾನಸಭಾ ಚುನಾವಣೆ ಹಿನ್ನೆಲೆ ಮೇ 10ರಂದು ನಡೆಯಲಿದ್ದು, ಅಂದು ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಎಪಿಕ್ ಕಾರ್ಡ್ ನ್ನು ಹೊಂದಿಲ್ಲದಿದ್ದರೂ ನೀವು ಮತದಾನ ಮಾಡಬಹುದಾಗಿದೆ. ಆದರೆ ಚುನಾವಣಾ ಆಯೋಗ ತಿಳಿಸಿದ ಕೆಳಕಂಡ 12 ಪರ್ಯಾಯ ದಾಖಲಾತಿಗಳಲ್ಲಿ ಒಂದು ದಾಖಲಾತಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಮೇ 10ರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಧಿಯನ್ನು ನಿಗದಿಪಡಿಸಿದ್ದು, ಮತದಾರರ ಗುರುತಿನ ಚೀಟಿ, ತಮ್ಮ ಭಾವಚಿತ್ರವಿರುವ ಕೆಳಕಂಡ 12 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ, ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಲಿಸಿದೆ.

12 ಪರ್ಯಾಯ ದಾಖಲೆಗಳ ವಿವರ ಇಂತಿದೆ.

1) ಆಧಾರ್ ಕಾರ್ಡ್
2) ಎಮ್.ಎನ್.ಆರ್.ಇ.ಜಿ.ಎ ಜಾಬ್ ಕಾರ್ಡ್
3) ಬ್ಯಾಂಕ್ ಮತು ಅಂಚೆ ಕಚೇರಿಗಳು ನೀಡುವ ಭಾವಚಿತ್ರವುಳ್ಳ ಪಾಸ್ಬುಕ್
4) ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
5) ಡ್ರೈವಿಂಗ್ ಲೈಸೆನ್ಸ್
6) ಪ್ಯಾನ್ ಕಾರ್ಡ್
7) ಎನ್ಪಿಆರ್ ಅಡಿ ಆರ್ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
8) ಇಂಡಿಯನ್ ಪಾಸ್ಪೋರ್ಟ್
9) ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
10) ರಾಜ್ಯ/ ಕೇಂದ್ರ ಸರ್ಕಾರ/ ಸಾರ್ವಜನಿಕ ಉದ್ಯಮಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿ
11) ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ.
12) ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಕಾರ್ಡ್.

ಇಷ್ಟು ದಾಖಲೆಗಳಲ್ಲಿ ಒಂದನ್ನು ತೋರಿಸಿ ನೀವು ಮತದಾನ ಮಾಡಬಹುದಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ.


[ays_poll id=3]