K2kannadanews.in
Leopard attack ಮುಂಬೈ : ಹೊಲದಲ್ಲಿ ಕೆಲಸ (work) ಮಾಡುತ್ತಿದ್ದ ವೇಳೆ ಚಿರತೆಯೊಂದು (leopard) ಮಹಿಳೆಯನ್ನು (Women) 100 ಅಡಿ ಎಳೆದೊಯ್ದು ಬಲಿ ಪಡೆದಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಹೌದ ಮಹಾರಾಷ್ಟ್ರ (Maharashtra) ಪುಣೆಯ(Pune) ಜುನ್ನಾರ್ (Junnar) ತೆಹಸಿಲ್‌ನಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸುಜಾತಾ ಧರೆ (40) ಎಂಬುವವರ ಮೆಲೆ ಹಲ್ಲೇಮಾಡಿದೆ. ಅಡಗಿ ಕುಳಿತಿದ್ದ ಚಿರತೆ ಕೆಲ ಸಮಯ (Time) ಕಾದು ದಾಳಿ ಮಾಡಿದೆ ಎನ್ನಲಾಗುತ್ತಿದೆ. ಮಹಿಳೆಯ ಒದ್ದಾಟದ ನಡುವೆಯೂ ಚಿರತೆ ಆಕೆಯನ್ನು ಸುಮಾರು 100 ಅಡಿಗಳಷ್ಟು (feet) ದೂರ ಎಳೆದುಕೊಂಡು ಹೋಗಿದೆ. ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ (Spot death) ಮೃತಪಟ್ಟಿದ್ದಾಳೆ.
ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಈ ವರ್ಷ ಮಾರ್ಚ್‌ನಿಂದ (March) ಜುನ್ನಾರ್ ಅರಣ್ಯ ವಿಭಾಗದಲ್ಲಿ ಇದು ಏಳನೇ ಮಾರಣಾಂತಿಕ ಚಿರತೆ ದಾಳಿ ಎಂದು ವರದಿಯಾಗಿದೆ. ಘಟನೆಯ ಬಳಿಕ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.