K2kannadanews.in
Viral News python : ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವುಗಳಲ್ಲಿ ಒಂದಾದ ಟಿಕ್ಯುಲೇಟೆಡ್ ಹೆಬ್ಬಾವು. ಈ ಹಾವಿನ ವೀಡಿಯೋ ಒಂದು ವೈರಲ್ ಆಗಿದ್ದು, ಇದು ವಿಷರಹಿತ ಮತ್ತು ಅಷ್ಟೇ ಅಪಾಯ ಎಂದು ಹೇಳಲಾಗುತ್ತದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಹತ್ತುತ್ತಿರುವುದು ತೋರಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಹಾವು ತನ್ನ ದೇಹ ಸುತ್ತಲೂ ಸುತ್ತುವ ಮೂಲಕ ತನ್ನ ಬೇಟೆಯನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ರೆಟಿಕ್ಯುಲೇಟೆಡ್ ಹೆಬ್ಬಾವು ಅತಿ ಉದ್ದದ ಹಾವುಗಳಲ್ಲಿ ಒಂದಾಗಿದೆ. ಕೆಲವು 33 ಅಡಿ ಉದ್ದಗಳವರೆಗೆ ಬೆಳಯುತ್ತವೆ. ಅವು ತೂಕ 165 ಪೌಂಡ್‌ಗಳವರೆಗೆ ಇರಬಹುದು. ಈ ಹಾವುಗಳಲ್ಲಿ ವಿಷವಿಲ್ಲದಿದ್ದರೂ ಇವು ತುಂಬಾ ಅಪಾಯಕಾರಿಯಾಗಿವೆ. ಬೇಟೆಯನ್ನು ಹಿಡಿಯಲು ಗೋಡೆ ಏರುತ್ತಿರುವುದನ್ನು ಕಂಡು ನೆಟ್ಟಿಗರು ಗಾಬರಿಗೊಂಡಿದ್ದಾರೆ.