ಸಿಜಿಕೆ ರಂಗಪುರಸ್ಕಾರ,ಸಿಜಿಕೆ ಪ್ರಶಸ್ತಿ ಪ್ರದಾನ
![]() |
![]() |
![]() |
![]() |
![]() |
ರಾಯಚೂರು : ಕರ್ನಾಟಕ ಬೀದಿನಾಟಕ ಅಕಾಡಮಿ ಬೆಂಗಳೂರು, ರಂಗಸಿರು ಸಾಂಸ್ಕೃತಿಕ ಕಲಾಬಳಗ ವತಿಯಿಂದ ಫೆಬ್ರವರಿ 25 ರಂದು ಸಿಜಿಕೆ ರಂಗಪುರಸ್ಕಾರ ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 10-30 ಹಮ್ಮಿಕೊಳ್ಳಲಾಗಿದೆ ಎಂದು ರಂಗಸಿರಿ ಸಾಂಸ್ಕೃತಿಕ ಕಲಾಬಳಗ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ಸಿಜಿಕೆ ಪ್ರಶಸ್ತಿಯನ್ನು ಹಿರಿಯ ಕಲಾವಿದ ಬಿ.ರಾಜಗೋಪಾಲ,ಕವಿತಾಳ ಹಿನ್ನೆಲೆ ಗಾಯಕ ಎಸ್.ಪಿ. ಸಿದ್ದಾಯ್ಯಸ್ವಾಮಿ ಹಿರೇಮಠ,ಆಶಾಪೂರು ಬೀದಿನಾಟಕ ಮತ್ತು ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ರಂಗಭೂಮಿ ಹಾಗೂ ಪ್ರಸಾಧನ ಕಲಾವಿದ ವೆಂಕಟನರಸಿಂಹಲು ಅವರಿಗೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಸಾಹಿತಿ ವೀರಹನುಮಾನ ಅವರು ಮಾಡಲಿದ್ದಾರೆ. ಕರ್ನಾಟಕ ಬೀದಿನಾಟಕ ಅಕಾಡಮಿ ಅಧ್ಯಕ್ಷ ಸಾಂಬಶಿವ ದಳವಾಯಿ ಪ್ರಶಸ್ತಿ ಪ್ರದಾನವನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯದ ಅಧ್ಯಕ್ಷ ವಿ.ಎನ್.ಅಕ್ಕಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಹಿರಿಯ ರಂಗಭೂಮಿ ಕಲಾವಿದ ತಾಯಣ್ಣ ಯರಗೇರಾ,ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಝಾಕ್ ಉಸ್ತಾದ್, ಸಂಸಥಿಯೇಟರ್ ಅಧ್ಯಕ್ಷ ಸುರೇಶ ಸಿ.ಎಂ,ರಂಗ ನಿರ್ದೇಶಕ ಲಕ್ಷ್ಮಣ ಮಂಡಲಗೇರಾ ಅವರು ಆಗಮಿಸಲಿದ್ದಾರೆ.
![]() |
![]() |
![]() |
![]() |
![]() |