
ಸಿರವಾರ : ಆಧುನಿಕ ಜೀವನದಲ್ಲಿ ಕ್ರೀಕೇಟ್ ಮಾತ್ರ ಕ್ರೀಡೆ ಎಂದುಕೊಂಡಿದ್ದಾರೆ, ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಯುವ ಜನತೆ ದೇಶಿಯ ಕ್ರೀಢೆಯಾದ ಕಬ್ಬಡಿ ಆಡುತ್ತಿರುವುದು ಉತ್ತಮ ಬೆಳವಣಿಗೆ ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಹೇಳಿದರು.
ತಾಲೂಕಿನ ಮಾಚನೂರು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಕ್ರೀಡೆಗಳಿಂದ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸಧೃಡತೆ ಹೆಚ್ಚಾಗುತ್ತದೆ. ಯುವಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು. ಆಸಕ್ತಿಯಿರುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದರು. ಮೆಕೋ ಕಂಟ್ರಕ್ಷನ್ಸ್ ಅಧ್ಯಕ್ಷರಾದ ಎಂ.ಈರಣ್ಣ ಅವರು ಮಾತನಾಡಿ ಮೊಬೈಲ್ ಯುಗ ಆರಂಭದ ನಂತರ ಯುವಕರು ಕ್ರೀಡೆಗಳನ್ನು ಮರೆತು, ಮೊಬೈಲ್ ದಾಸರಾಗಿ ಆನ್ಲೈನ್ ಆಟಗಳಿಗೆ ಆದ್ಯತೆ ನೀಡುತ್ತಿರುವುದು ಖೇದನಿಯ ಸಂಗತಿ. ಇದರ ನಡುವೆಯೂ ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಮಾಚನೂರು ಗ್ರಾಮದ ಯುವಕರು ಕಬಡ್ಡಿ ಕ್ರೀಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
![]() |
![]() |
![]() |
![]() |
![]() |
[ays_poll id=3]