K2kannadanews.in
Local News ರಾಯಚೂರು : ಬ್ರೋ ಅವಳನ್ನು ಹಿಡ್ಕೊಳ್ಳಿ ನನ್ನ ನೀರಿಗೆ ತಳ್ಳಿದ್ದಾಳೆ, ಅಂತ ನದಿಯ ಮಧ್ಯದ ಕಲ್ಲಿನ ನಿಂತ ಪತಿ ಹೇಳುತ್ತಾನೆ. ಸ್ಥಳಿಯರು ಅವನನ್ನು ಕಾಪಾಡ್ತಾರೆ ಆದ್ರೆ ಸೇತುವೆ ಮೇಲೆ ಬಂದ ನಂತರ ಮತ್ತೆ ಇಬ್ಬರೂ ಬೈಕ್ ಹತ್ತಿ ಹೋದ ಘಟನೆ ಗುರ್ಜಾಪುರ ಬ್ರಿಜ್ ಕಂ ಬ್ಯಾರೆಜ್ ಮೇಲೆ ನಡೆದಿದೆ.
ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಮೇಲೆ ನಡೆದಿದ್ದು, ಪತಿಯ ಜೊತೆ ಬೈಕ್ ನಲ್ಲಿ ಬಂದಿದ್ದ ಪತ್ನಿ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುಲು ನಿಂತಿದ್ದಾರೆ. ಈ ವೇಳೆ ಸೇತುವೆ ಕೊನೆಗೆ ನಿಂತಿದ್ದ ಪತಿ ನದಿಗೆ ಬಿದ್ದಿದ್ದಾನೆ. ನದಿಯಲ್ಲಿ ಈಜಿಕೊಂಡು ಬಂಡೆಯೊಂದರ ಮೇಲೆ ಪತಿ ಕುಳಿತುಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ಅದೇ ಸೇತುವೆ ಮೇಲೆ ಸಾಗುತ್ತಿದ್ದವರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನದಿಯಲ್ಲಿದ್ದ ಪತಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ರಾಯಚೂರು ಶಕ್ತಿನಗರದ ದಂಪತಿ ನಡುವೆ ಗಲಾಟೆಯಾಗಿದ್ದು, ಪತಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎನ್ನಲಾಗಿದೆ. ಆದರೆ ಸ್ಥಳೀಯರು ಕಷ್ಟಪಟ್ಟು ಸೇತುವೆ ಮೇಲೆ ಕರೆತಂದ ನಂತರ ಕೊಂಚ ಜಗಳವಾಡಿ ಇಬ್ಬರು ಜೊತೆಯಾಗಿ ಬೈಕ್ ನಲ್ಲಿ ಹೋದ ಘಟನೆ ನಡೆದಿದೆ.