K2kannadanews.in
Heavy Rain ದೇವದುರ್ಗ : ರಾತ್ರಿ (Night) ಸುರಿದ ಧಾರಾಕಾರ ಮಳೆಗೆ (Heavy rain) ಸೇತುವೆ (Bridge) ಕೊಚ್ಚಿ ಹೋಗಿ ಮೊರಾರ್ಜಿ ವಸತಿ ಶಾಲೆ (School) ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆ (Murarji school) ಪಕ್ಕದಲ್ಲಿ ಸೇತುವೆ ಕೊಚ್ಚಿ ಹೋದ ಘಟನೆ ನಡೆದಿದೆ. ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದರಿಂದ ಸಂಚಾರಕ್ಕೆ ಪರದಾಡುವಂತಾಗಿದೆ. ಶಾಲಾ ಮಕ್ಕಳು (Students), ಶಿಕ್ಷಕರಿಗೆ (Teacher) ರಸ್ತೆ ಸಂಪರ್ಕ ಕಡಿತವಾಗಿದೆ. ಮಕ್ಕಳಿಗೆ ಪಡಿತರ ಧಾನ್ಯ, ತರಕಾರಿ ಸಾಗಿಸಲು ಶಾಲಾ ಸಿಬ್ಬಂದಿ ಹೈರಾಣಗುತ್ತಿದ್ದಾರೆ.
ಸೇತುವೆ ಕುಸಿತದ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೇ ಇರುವುದು ಘಟನೆಗೆ ಕಾರಣ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ತಕ್ಷಣಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸುವಂತೆ ವಿದ್ಯಾರ್ಥಿಗಳು ಸ್ಥಳಿಯರು ಆಗ್ರಹಿಸುತ್ತಿದ್ದಾರೆ.