K2kannadanews.in
snake bite ರಾಯಚೂರು : ಗ್ರಾಮ ಪಂಚಾಯಿತಿ (grama panchayat) ನಿರ್ಲಕ್ಷ್ಯ ಬೀದಿ ದೀಪಗಳಿಲ್ಲದೆ (Street light) ಕತ್ತಲೆಯಲ್ಲಿ ಹೊಗುತ್ತಿದ್ದ ವೇಳೆ ಹಾವು ಕಚ್ಚಿ (snake bite) ಬಾಲಕ ಮೃತ ಪಟ್ಟ ಘಟನೆ ರಘುನಾಥಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ತಾಲೂಕಿನ ರಘುನಾಥನಹಳ್ಳಿ (Ragunatha halli) ಗ್ರಾಮದಲ್ಲಿ ಘಟನೆ ನಡೆದಿದ್ದು,
ನಾಲ್ಕನೇ ತರಗತಿ (4th standard) ವಿದ್ಯಾರ್ಥಿ ಶ್ರೀಕಾಂತ್ (10) ಮೃತಪಟ್ಟ (death) ದುರ್ದೈವಿ. ಮಗನನ್ನು (Son) ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಜಾಗೀರ ವೆಂಕಟಾಪುರ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ ಬಾಲಕನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಲವಾರು ತಿಂಗಳುಗಳಿಂದ ರಘುನಾಥನಹಳ್ಳ ಗ್ರಾಮದ ಬೀದಿಗಳಲ್ಲಿ ದೀಪಗಳಿಲ್ಲದೆ ಕತ್ತಲಲ್ಲೇ ಜನ ಓಡಾಡಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದ ಅವಘಡಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕಿದರು. ಒಂದು ಜೀವ ಹೋದಮೇಲಾದ್ರೂ ಗ್ರಾಮ ಪಂಚಾಯತಿ ಸಿಬ್ಬಂದಿ ಎಚ್ಚೆತ್ತುಕೊಳ್ಳಲಿ ಎಂದ ಗ್ರಾಮಸ್ಥರು ಹೇಳುತ್ತಿದ್ದಾರೆ.