This is the title of the web page
This is the title of the web page
State News

ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು: CM


K2 ಪೊಲಿಟಿಕಲ್ ನ್ಯೂಸ್ : ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವಸಂತನಗರ ವಾರ್ಡ್ ಬೂತ್ ನಂ.50 ಇಲ್ಲಿಂದ ವಿಜಯ ಸಂಕಲ್ಪ ಪ್ರಾರಂಭವಾಗುತ್ತಿದೆ. ಬೂತ್ ಮಟ್ಟದ ವಿಜಯ ಸಾಧ್ಯವಾಗಿಸಲು ಬೂತ್ ಮಟ್ಟದ ಅಭಿಯಾನವನ್ನು ಕೈಗೊಳ್ಳಲು ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಚಾಲನೆಯನ್ನು ನೀಡಲಾಗಿದೆ. ಅತ್ಯಂತ ಕಷ್ಟವಾದ ಕ್ಷೇತ್ರ ಎನಿಸಿರುವ ಶಿವಾಜಿನಗರದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿತ್ತು. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹಿಂದೆ ಗೆದ್ದಿದ್ದರು. ನಿರ್ಮಲ್ ಕುಮಾರ್ ಸುರಾನಾ ಚಿಕ್ಕಪೇಟೆಯಲ್ಲಿ ಪಿಸಿ ಮೋಹನ್ ಗೆದ್ದಿದ್ದರು. ಶಿವಾಜಿನಗರ ಕ್ಷೇತ್ರದ ವಿಜಯಕ್ಕಾಗಿ ಇಲ್ಲಿ ಬಂದಿದೇನೆ. ಇದಕ್ಕೆ ಹೆಚ್ಚಿನ ಸಮಯವನ್ನು ಕೊಡುತಿದ್ದು, ಕರೆದಾಗ ಬಂದು ಕೆಲಸ ಕಾರ್ಯಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡಲಾಗುವುದು ಎಂದರು. ಗೆಲ್ಲಲು ಬೂತ್ ಸಶಕ್ತವಾಗಬೇಕು. ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ, ಕರ್ನಾಟಕದಲ್ಲಿ 130 ಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿಗೆ ಬಂದೇ ಬರುತ್ತದೆ. ಇದೊಂದು ಒಂದು ರಾಜಕೀಯ ಸಂಕೇತ ಎಂದರು.

*ಬೂತ್ ಮಟ್ಟದ ಸಮಿತಿ ರಚಿಸಿ*
ಪ್ರತಿಯೊಂದು ಬೂತ್ ನ್ನು ಸಶಕ್ತಗೊಳಿಸಲು ಎಲ್ಲಾ ಪ್ರಮುಖರ ಸಭೆ ಕರೆದು, 100 ಸಕ್ರಿಯವಾಗಿ ಕೆಲಸ ಮಾಡುವ ಕೀ ಮತದಾರರನ್ನು ಒಳಗೊಂಡ ಬೂತ್ ಮಟ್ಟದ ಸಮಿತಿಯನ್ನು ರಚಿಸಿ ಪ್ರತಿಯೊಂದು ಬೂತಿನಲ್ಲಿ ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಯುವಕರ ಮೋರ್ಚಾಗಳನ್ನು ಸ್ಥಾಪಿಸಿ, ಸಕ್ರಿಯವಾಗಿ ಕೆಲಸ ಮಾಡಿ. ಪೇಜ್ ಸಮಿತಿಗಳಲ್ಲಿ ಪೇಜ್ ಪ್ರಮುಖರಿದ್ದಾರೆ. ಇಲ್ಲಿ ಬರುವ ಸಮಿತಿಯನ್ನು ರಚಿಸಿ ನಿರಂತರವಾಗಿ ಮೂರು ತಿಂಗಳು ಕೆಲಸ ಮಾಡಬೇಕು. ಪ್ರತಿ ಮನೆಗೂ ಭೇಟಿ ನೀಡಿ 4 ಬಾರಿ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್ಸಿನ ಜನವಿರೋಧಿ ನೀತಿಯನ್ನು ತಿಳಿಸುವ ಕೆಲಸವನ್ನು ಮಾಡಬೇಕು. 5 ನೇ ಬಾರಿ ಚುನಾವಣೆಗೆ ಮುನ್ನ ಮತ ಕೇಳಲು ಹೋಗಬೇಕು. ಶಿವಾಜಿನಗರದಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸಬೇಕು. ಬಿಜೆಪಿ ಕಾರ್ಯಕರ್ತರಾಗಿ ಹೆಮ್ಮೆಯಿಂದ ಜನರ ಬಳಿಗೆ ಹೋಗಲು ಸಾಧ್ಯವಿದೆ ಎಂದರು. ವಿಶ್ವದಲ್ಲಿಯೇ ಬಿಜೆಪಿ ಅತಿ ದೊಡ್ಡ ಪಕ್ಷ. ಅತಿ ಹೆಚ್ಚು ಜನ ನಮ್ಮ ತತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸದಸ್ಯರಾಗಿದ್ದಾರೆ. ದೇಶಭಕ್ತ, ಸಶಕ್ತ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಭಾರತದ ಭದ್ರತೆಯ ಜೊತೆಗೆ ಭಾರತದ ಪ್ರಗತಿ, ಆರ್ಥಿಕ, ಸಾಮಾಜಿಕ, ಪ್ರಗತಿಯ ಜೊತೆಗೆ ವಿಶ್ವ ಮಾನ್ಯ ಭಾರತವನ್ನು ರೂಪಿಸಿರುವ ನಾಯಕರು ಎಂದರು.

*ಕಾಂಗ್ರೆಸ್ ನ್ನು ಜನರು ತಿರಸ್ಕರಿಸಿದ್ದಾರೆ:* ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸವನ್ನು ಮಾಡುತ್ತಾರೆ.ಅವರು ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡದಿರುವ ಕಾರಣ ಜನರು ಕಳೆದ ಬಾರಿ ತಿರಸ್ಕಾರ ಮಾಡಿದ್ದಾರೆ. ಈ ಬಾರಿಯೂ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಭಾಜಪ ಅರಳಬೇಕೆಂಬುದು ನಮ್ಮ ಕನಸಾಗಿದೆ. ದೇಶ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಬೂತ್ ಮಟ್ಟದ ಸಂಘಟನೆ ಮಾಡುವಾಗಿ ಸ್ಥಳೀಯ ಸಮಸ್ಯೆಗಳೇನು ಎಂಬುದರ ಅರಿವಿರಬೇಕು. ಆಯಾ ವಾರ್ಡಿನಲ್ಲಿರುವ ರಸ್ತೆ, ನೀರಿನ ಸಮಸ್ಯೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

*ಬೂತ್ ಸಂಘಟನೆಯಲ್ಲಿ ಸ್ಥಳೀಯ ಸಮಸ್ಯೆಗಳ ಅರಿತು ಪರಿಹಾರ ಒದಗಿಸಬಹುದು:*
ಬೂತ ಮಟ್ಟದ ಸಂಘಟನೆ ಎಂದರೆ ಎರಡೂ ಕಡೆಯ ಸಂವಹನವಿದ್ದಂತೆ. ಪಕ್ಷದ ಕೆಲಸಗಳನ್ನು ತಿಳಿಸುವುದು ಒಂದೆಡೆಯಾದರೆ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ತಿಳಿದು ಪರಿಹಾರ ಒದಗಿಸುವುದು ಒಂದು ಕಡೆ. ಈ ರೀತಿ ಕೆಲಸ ಮಾಡುವ ಧೈರ್ಯವನ್ನೂ ಯಾವ ಪಕ್ಷವೂ ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭ ದೊರೆಯಬೇಕು. ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಸರ್ಕಾರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡಲು, ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸುವ ತತ್ವ ಪಾಲಿಸುವುದು ಭಾರತ ಜನತಾ ಪಕ್ಷದ್ದಾಗಿದೆ ಎಂದರು.

*ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಹೋರಾಟ :*
ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ರಾಜಕೀಯವಾಗಿ ಜೀವಂತವಾಗಿರಲು ಹಾತೊರೆಯುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜನರ ಬಗ್ಗೆ ಚಿಂತನೆ ಅವರಿಗಿಲ್ಲ. ನಮ್ಮ ಪಕ್ಷದ ನೀತಿ ಧರ್ಮ ಎಂದಿಗೂ ಬದಲಾಗುವುದಿಲ್ಲ. ಭಾಜಪ ಜನರ ರಾಜಕಾರಣ ಮಾಡುತ್ತಾ ಬಂದಿದೆ. ಶಿವಾಜಿನಗರ ಕ್ಷೇತ್ರದಲ್ಲಿ 13 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಭಾಜಪ ಗೆಲ್ಲುವಂತಾಗಬೇಕು ಎಂದರು.


[ays_poll id=3]