
K2 ನ್ಯೂಸ್ ಡೆಸ್ಕ್ : ಭಾರತದ ನಾಯಕತ್ವದಲ್ಲಿ ಹೊಸ ಯುಗ ಪ್ರಾರಂಭವಾಗಿದ್ದು,2023ರ ವಿಧಾನಸಭಾ ಚುನಾವಣೆಯಲ್ಲಿ ಸಕಾರಾತ್ಮಕತೆಯಿಂದ ಮತ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸದೃಡ ಸಂಘಟನೆ ಜೊತೆ ಗೆ ದೇಶ ಮೊದಲು ಎಂಬುದು ಭಾಜಪದ ಉದ್ದೇಶ. ಏಕ ಭಾರತ ಶ್ರೇಷ್ಟ ಭಾರತ ಎಂದಿರುವ ಪ್ರಧಾನಿ ಮೋದಿಯವರ ನಾಯಕತ್ವ ವಿಶ್ವಮಾನ್ಯವಾದುದು. ಅದೇ ರೀತಿ ಕರ್ನಾಟಕದಲ್ಲಿ ಎಲ್ಲರೂ ಒಪ್ಪಿರುವ ನಾಯಕತ್ವ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ. ರಾಜ್ಯದ ಜನಪರ ಹಾಗೂ ರೈತಹೋರಾಟಗಳನ್ನು ಮಾಡಿ, ರೈತ ಸಮೂಹವನ್ನು ಒಗ್ಗೂಡಿಸಿ ಭಾಜಪದ ಪರ ನಿಲ್ಲುವಂತೆ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ.
ನರೇಂದ್ರ ಮೋದಿ, ನಡ್ಡಾ ಅವರ ನಾಯಕತ್ವದಲ್ಲಿ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಸಕಾರಾತ್ಮಕ ರಾಜಕಾರಣದಿಂದ ದೇಶದ ಹಾಗೂ ನಾಡಿನ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಗುಜರಾತಿನ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವು ವಿಶ್ವದಾಖಲೆಯನ್ನು ಸಾಧ್ಯವಾಗಿಸಿದ್ದಾರೆ ಎಂದರು.
ಕಾಂಗ್ರೆಸ್ ಧೂಳಿಪಟವಾಗಲಿದೆ : ನಮ್ಮ ಜನಕಲ್ಯಾಣ ಕಾರ್ಯಕ್ರಮಗಳು, ದೀನದಲಿತರ ಏಳಿಗೆಯ ಕಾರ್ಯಕ್ರಮ ಯಶಸ್ಸಿನ ಮೇಲೆ ಮತ ಪಡೆಯಲಾಗುವುದು. ಈ ಬಾರಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಇತ್ತೀಚೆಗೆ ಒಳಮೀಸಲಾತಿ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸರ್ಕಾರ ರಚಿಸಿದೆ. ಇದಕ್ಕೆ ಸಿದ್ದರಾಮಯ್ಯನವರು ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಕಾಂಗ್ರೆಸ್ ಗೆ ಅಧಿಕಾರವನ್ನು ನೀಡಿದರೆ ಈ ಕೆಲಸವನ್ನು ಮಾಡಲಾಗುವುದು ಎಂದರು. ಅವರು ಸಮಾವೇಶಕ್ಕೆ ಹೋಗಿ ಕೇವಲ ದೀಪ ಹಚ್ಚಿಬಂದರೇ ಹೊರತು ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಭಂಡತನದ ಬದ್ಧತೆ. ಸಾರ್ವಜನಿಕವಾಗಿ ಸುಳ್ಳು ಹೇಳುವಂತಹ ಪ್ರತೀತಿಯನ್ನು ಬೆಳೆಸಿಕೊಂಡಿದ್ದು, ಈಗ ಜನ ಜಾಗೃತರಾಗಿದ್ದಾರೆ ಎಂದರು.
ಕಾಂಗ್ರೆಸ್ ತಂತ್ರಗಾರಿಕೆಗೆ ಜನರು ಮರಳಾಗುವುದಿಲ್ಲ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೊದಲಿಗೆ 4 ಕೆಜಿ ಅಕ್ಕಿ ನೀಡಿ, ಚುನಾವಣೆಯ ಸಂದರ್ಭದಲ್ಲಿ 7 ಕೆಜೆ ಕೊಡಲು ಪ್ರಾರಂಭಿಸಿದರು. ಆದರೆ ಈಗಾಗಲೇ ನಮ್ಮ ಸರ್ಕಾರದ 5 ಕೆಜಿ ಹಾಗೂ ಗರೀಬ್ ಕಲ್ಯಾಣ ಯೋಜನೆಯಿಂದ 5 ಕೆಜಿ, ಹೀಗೆ ಒಟ್ಟು 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಕಾಂಗ್ರೆಸ್ ನವರ ಅನ್ನಭಾಗ್ಯದಲ್ಲಿ ಅಕ್ಕಿ ಮೋದಿಯವರದ್ದು, ಸಿದ್ದರಾಮಯ್ಯನವರ ಚಿತ್ರದ ಚೀಲ ಮಾತ್ರ ಕಾಂಗ್ರೆಸ್ ನವರದ್ದು. ಜನರು ಇಂತಹ ತಂತ್ರಗಾರಿಕೆಗೆ ಮರಳಾಗುವುದಿಲ್ಲ ಎಂದರು.
![]() |
![]() |
![]() |
![]() |
![]() |
[ays_poll id=3]