ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಯುವಕನ ಶವ ಪತ್ತೆ..

K 2 Kannada News
ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಯುವಕನ ಶವ ಪತ್ತೆ..
Oplus_0
WhatsApp Group Join Now
Telegram Group Join Now

K2kannadanews.in

Suicide News ರಾಯಚೂರು : ಪ್ರೀತಿಸಿದ (Love) ಹುಡುಗಿಯ ಮದುವೆಯಾಗಲು (Marriage) ಮನೆಯಲ್ಲಿ ನಿರಾಕರಿಸಿದ್ದಕ್ಕೆ (refusing) ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ (Final year student) ಮಲಿಯಾಬಾದ್ ಅರಣ್ಣ ಪ್ರದೇಶದಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಡೆದಿದೆ.

ರಾಯಚೂರು (Raichur) ತಾಲೂಕಿನ ಮಲಿಯಾಬಾದ್ ಅರಣ್ಯ (Maliyabad forest) ಪ್ರದೇಶದಲ್ಲಿ ಯುವಕನೋರ್ವ ವಿಷ (poison) ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಯಚೂರು ತಾಲೂಕಿನ ಗಧಾರ್ ಗ್ರಾಮದ 21 ವರ್ಷದ ಯುವಕ ಹನುಮೇಶ್ (Hanumaesh) ಮೃತ ಯುವಕ. ಪ್ರೇಮ ವೈಫಲ್ಯ (Love failure) ಹಿನ್ನೆಲೆ ವಿಷಸೇವಿಸಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಮೃತ ಹನುಮೇಶ್ ನಗರದ ಖಾಸಗಿ ಕಾಲೇಜಿನ ಬಿಎ ಅಂತಿಮ (BA final year) ವರ್ಷದ ವಿದ್ಯಾರ್ಥಿಯಾಗಿದ್ದು, ಬಿಸಿಎಂ ಹಾಸ್ಟೆಲ್‌ನಲ್ಲಿದ್ದುಕೊಂಡು (BCM hostel) ಓದುತ್ತಿದ್ದ. ಮದುವೆಗೆ ಯುವತಿ ಮನೆಯವರು ನಿರಾಕರಿಸಿದಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ (RIMS Hospital) ರವಾನಿಸಲಾಗಿದೆ. ಆಸ್ಪತ್ರೆ ಬಳಿ   ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯರಗೇರಾ ಪೊಲೀಸ್ ಠಾಣಾ (Yaragera police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article