K2kannadanews.in
Viral video ವೈರಲ್ ನ್ಯೂಸ್ : ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲಾಗುತ್ತಿವೆ. ಕೆಲ ವೀಡಿಯೋಗಳು ಮನಸ್ಸಿಗೆ ಮುದ ನೀಡುವಂತಹ ವಿಡಿಯೋಗಳಾಗಿದ್ದರೆ, ಇನ್ನಷ್ಟು ವಿಡಿಯೋಗಳು ಮನ ಕಲಕುವಂತಿರುತ್ತವೆ. ಅಂತದ್ದೇ ಒಂದು ವೈರಲ್ ಆಗಿದ್ದು ಬ್ಯಾಂಕ್ ನೌಕರನೊಬ್ಬ ಕೆಲಸ ಮಾಡುತ್ತಿರುವಾಗಲೇ, ಪ್ರಾಣ ಪಕ್ಷಿ ಹಾರಿ ಹೋದ ಮನಕಲಕುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ HDFC ಬ್ಯಾಂಕ್ ನೌಕರ ರಾಜೇಶ್ ಕುಮಾರ್ ಶಿಂಧೆ (30) ಎಂದು ಗುರುತಿಸಲಾಗಿದೆ ಮೃತಪಟ್ಟ ದುರ್ದೈವಿ ಎಂದು ಹೇಳಲಾಗುತ್ತಿದೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯು ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಸಿಬ್ಬಂದಿ ಮಹೋಬಾದ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಯಲ್ಲಿ ಕೃಷಿ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ರಾಜೇಶ್ ಕುಸಿದು ಬೀಳುತ್ತಿದ್ದಂತೆ ಸಹೋದ್ಯೋಗಿಗಳನ್ನು ಅವರನ್ನು ಎತ್ತುಕೊಂಡು ಹೋಗಿ ಮುಖಕ್ಕೆ ನೀರು ಚಿಮುಕಿಸಿದ್ದಾರೆ. ಆದರೆ ಅವರಿಗೆ ಹೃದಯಾಘಾತ ಆಗಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ರಾಜೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.