This is the title of the web page
This is the title of the web page
Local News

ಬಿಲ್ ಕಲೆಕ್ಟರ್ ಇನ್ ಬಾರ್ ಶಾಪ್


ಲಿಂಗಸೂಗೂರು : ತಾಲೂಕಿನಲ್ಲಿ ಅದ್ಯಾಕೋ ಕೆಲ ಅಧಿಕಾರಿಗಳು ಕೆಲಸದ ಸಮಯದಲ್ಲಿಯೇ ಮಧ್ಯಪಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಂತೆ ಕಾಣುತ್ತಿದೆ, ಇತ್ತೀಚಿಗಷ್ಟೇ ಹಟ್ಟಿ ವ್ಯಾಪ್ತಿಯಲ್ಲಿ ಶಾಲಾ ಶಿಕ್ಷಕರು ಶಾಲಾ ಸಮಯದಲ್ಲಿ ಪಾರ್ಟಿ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು ಲಿಂಗಸಗೂರು ತಾಲೂಕಿನ ಮಾವಿನಭಾವಿ ಗ್ರಾಮ ಪಂಚಾಯತಿಯ ಕರ ವಸೂಲಿಗಾರ ರಾಘವೇಂದ್ರ ಕುಲಕರ್ಣಿ ಅವರು ಕೆಲಸದ ಸಮಯದಲ್ಲಿ ಲಿಂಗಸುಗೂರ ಪಟ್ಟಣದ ಭಾರ್ ನಲ್ಲಿ ಮಧ್ಯೆಪಾನ ಮಾಡುತ್ತಿರುವ ವೀಡಿಯೋ ಸರಿ ಹಿಡಿಯಲಾಗಿದೆ. ಅಲ್ಲದೆ ಈ ಒಂದು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವೇ ದಿನಗಳ ಹಿಂದೆ ಇದೇ ತಾಲೂಕಿನ ಹಟ್ಟಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯ ಶಿಕ್ಷಕರು ಡಾಬದಲ್ಲಿ ಕುಳಿತು ಮಧ್ಯೆಪಾನ ಮಾಡಿ ಅಮಾನತ್ತಾಗಿರುವ ಘಟನೆ ಜರುಗಿ ತಿಂಗಳು ಕೂಡ ಗತಿಸಿಲ್ಲ. ಹೀಗಾಗಿ ಸಂಬಂಧಪಟ್ಟ ತಾಲೂಕು ಆಡಳಿತ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗ ಬೇಕಿದೆ.

ಮದ್ಯೆಪಾನ ಮಾಡುತ್ತಿರುವ ವೀಡಿಯೋ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಮರೇಶ ಯಾದವ ಗಮನಕ್ಕೆ ಬಂದ ತಕ್ಷಣ 1993 ರ 62(ಡಿ) & ಪ್ರಕರಣ 113 ರಲ್ಲಿ ಸದರಿ ನೌಕರ ಮೇಲೆ ಶಿಸ್ತು ಕ್ರಮವಹಿಸಲು ವರದಿ ನೀಡಲು ಸೂಚಿಸಿ ನೋಟಿಸ್ ನೀಡಿದ್ದಾರೆ. ಆದರೆ ಇಲ್ಲಿ ವಿಪರ್ಯಾಸವೆಂದರೆ ನೋಟಿಸ್ ನೀಡಿದ ಅಧಿಕಾರಿ 20 ದಿನ ಕಳೆದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಗ್ರಾಮ ಪಂಚಾಯತಿ ನೌಕರ ತಪ್ಪು ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ ಹಾಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳುತ್ತಾರೆ.


[ays_poll id=3]