
K2 ಪೊಲಿಟಿಕಲ್ ನ್ಯೂಸ್ : ಗಾಲಿ ಜನಾರ್ಧನ್ ರೆಡ್ಡಿ ಪಕ್ಷ ಸಕ್ರಿಯವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಡಗಿಕೊಂಡಿದ್ದು, ಕಾಂಗ್ರೆಸ್ ಬಿಜೆಪಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಎರಡು ಪಕ್ಷಗಳ ವಿರುದ್ಧ ಮುನಿಸು ಇರುವ ಮುಖಂಡರು ಕೆಆರ್‌ಪಿ ಪಕ್ಷದ ಕಡೆ ವಾಲುತ್ತಿರುವುದು ಎರಡು ಪಕ್ಷಗಳಿಗೆ ಬಾರಿ ಆಘಾತ ಎದುರಾಗಿದೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಹಾಗೂ 50,000 ಎಕರೆ ಪ್ರದೇಶದಲ್ಲಿ 10 ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಭರವಸೆ ನೀಡಿದೆ. ಕೊಪ್ಪಳದ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ & ಬಿಜೆಪಿ ಜೊತೆ ಮುನಿಸು ಹೊಂದಿರುವ ಹಲವು ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಪಕ್ಷದ ಪ್ರಮುಖ ನಾಯಕರನ್ನೇ ರೆಡ್ಡಿ ಸೆಳೆಯಲು ಆರಂಭಿಸಿರುವುದು ರಾಷ್ಟ್ರೀಯ ಪಕ್ಷಗಳಿಗೆ ಭಾರೀ ಆಘಾತ ತಂದಿದೆ.
![]() |
![]() |
![]() |
![]() |
![]() |
[ays_poll id=3]