
K2 ನ್ಯೂಸ್ ಡೆಸ್ಕ್: ಜನಾರ್ದನ್ ರೆಡ್ಡಿ ನೂತನ ಪಕ್ಷ ಸ್ಥಾಪಿಸುತ್ತಿದ್ದಂತೆ ಕೇಂದ್ರ ಸರ್ಕಾರ ಪರೋಕ್ಷವಾಗಿ ಸಿಬಿಐ ಎನ್ನುವ ದಾಳ ಉರುಳುಸಿದೆ. ಗಾಲಿ ಜನಾರ್ದನ್ ರೆಡ್ಡಿಗೆ ಶಾಕ್ ನೀಡಿದ ಸಿಬಿಐ ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡುತ್ತಿದೆ.
ಜನಾರ್ದನ ರೆಡ್ಡಿ ರಾಜಕೀಯ ಪಕ್ಷ ಸ್ಥಾಪಿಸಿದ ಬೆನ್ನಿಗೆಯೇ ಕೇಂದ್ರ ಸರ್ಕಾರ CBI ಮೂಲಕ ಪರೋಕ್ಷವಾಗಿ ದಾಳ ಉರುಳಿಸಿದೆ ಎಂದು ಹೇಳಲಾಗುತ್ತಿದೆ. ರೆಡ್ಡಿ ಆಸ್ತಿ ಜಪ್ತಿ ಸಂಬಂಧ ಸರ್ಕಾರದಿಂದ ಅನುಮತಿ ಪಡೆಯಲು ಹೈಕೋರ್ಟ್ ಮೇಟ್ಟಿಲೇರಿದೆ. 2020ರಲ್ಲಿ CBI ಮನವಿ ಮಾಡಿದ್ದರೂ, ರೆಡ್ಡಿ ಪಕ್ಷ ಸ್ಥಾಪಿಸಿದ ಬಳಿಕ CBI ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಆಸ್ತಿ ಮಾರಾಟದಿಂದ ಬಂದ ಸಂಪನ್ಮೂಲ ಬಳಸಿ ರೆಡ್ಡಿ ಪಕ್ಷ ಬಲಪಡಿಸುವ ಸಾಧ್ಯತೆ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಚಿಂತಿಸಿದೆ ಎನ್ನಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದಾರೆ. ಇದೇ ಸಂದರ್ಭದಲ್ಲೇ ಅವರಿಗೆ ಸಂಕಷ್ಟ ಎದುರಾಗಿದೆ. ರೆಡ್ಡಿ ಅಕ್ರಮವಾಗಿ ಗಳಿಸಿರುವ 219 ಆಸ್ತಿ ಜಪ್ತಿ ಮಾಡುವ ಸಂಬಂಧ CBI ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ CBI ಸರ್ಕಾರದ ಅನುಮತಿ ಕೋರಿತ್ತು. ಆದರೆ, ಸರ್ಕಾರ ಈ ಬಗ್ಗೆ ಗಮನಹರಿಸಿರಲಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ CBI ಹೈಕೋರ್ಟ್ ಮೆಟ್ಟಿಲೇರಿದೆ.
![]() |
![]() |
![]() |
![]() |
![]() |
[ays_poll id=3]