K2kannadanews.in
New scams ಗ್ರಾಹಕರೆ ಎಚ್ಚರ : ಬ್ಯಾಂಕುಗಳ ಹೆಸರಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ತಡೆಯಲು, OTP ಸೇವೆಯನ್ನು ನಿಲ್ಲಿಸಲಾಗಿತ್ತು. ಇದೀಗ ಖದೀಮರು ಹೊಸ ದಾರಿಯನ್ನು ಹುಡುಕಿಕೊಂಡಿದ್ದು ಬ್ಯಾಂಕಿನ ಹೆಸರಲ್ಲಿ ನಕಲಿ ಆ್ಯಪ್ ಳನ್ನ ಸೃಷ್ಟಿಸಿ ಮೋಸ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ.
ಹೌದು ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ನ ಲೋಗೋ ಬಳಸಿ ಸೈಬರ್ ಕಳ್ಳರು, ಹಣ ಕದಿಯುವ ಕೆಲಸ ಮಾಡುತ್ತಿದ್ದಾರೆ. ನೀವು ನಿಮ್ಮ ಆಧಾರ್, ಪ್ಯಾನ್, ಬ್ಯಾಂಕ್ ಅಕೌಂಟ್ ಅಪ್ಡೇಟ್ ಮಾಡಿ, ನೀವು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ, ನೀವೇ ನಿಮ್ಮ ಬ್ಯಾಂಕ್ ಅಕೌಂಟ್ ಅಪೆ ಡೇಟ್ ಮಾಡಬಹುದು, ಇಲ್ಲದಿದ್ದರೇ ಅಕೌಂಟ್ ಬ್ಲಾಕ್ ಆಗುತ್ತದೆ. ಹಾಗೆ ಆಬಾರದು ಅಂದ್ರ ನೀವು ಬೇಗ ಅಪ್ಡೇಟ್ ಮಾಡಬೇಕು ಎಂದು ಹೇಳುತ್ತಾರೆ. ಅಲ್ಲದೇ, ಹೆಚ್ಚು ಕಷ್ಟ ಪಡುವ ಅವಶ್ಯಕತೆ ಇಲ್ಲ. ಇಲ್ಲಿನ ಫೈಲ್ ಓಪನ್ ಮಾಡಿ, ನೀವು ನಿಮ್ಮ ಆಧಾರ್, ಪ್ಯಾನ್ ಎಲ್ಲವನ್ನೂ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ.
ಅವರು ಹೇಳಿದ ಹಾಗೆ ಅಪ್ಪಿ ತಪ್ಪಿ ನೀವು ಫೈಲ್ ಓಪನ್ ಮಾಡಿದ್ರೆ, ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ಇನ್‌ಫಾರ್ಮೇಶನ್ ಆ ಸ್ಕ್ಯಾಮರ್ ಪಡೆದು, ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಕದಿಯುವುದರ ಜೊತೆ, ನಿಮ್ಮ ಖಾಸಗಿ ಮಾಹಿತಿ ಪಡೆದು, ನಿಮಗೆ ಕಿರುಕುಳ ನೀಡಬಹುದು, ಹಣಕ್ಕಾಗಿ ಡಿಮ್ಯಾಂಡ್ ಮಾಡಬಹುದು. ಹೀಗಾಗಿ ಯಾರು ಯಾವ ಲಿಂಕ್ ಕಳುಹಿಸಿದರೂ, ಫೈಲ್ ಕಳುಹಿಸಿದರೂ ಅದನ್ನು ಓಪನ್ ಮಾಡಬೇಡಿ ಎಂದು ಪೊಲೀಸ್ ಅಧಿಕಾರಿ ಶಶಿಧರ್ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದ್ದಾರೆ.