K2kannadanews.in
Special train today onwords : ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ. ಇಂದಿನಿಂದ ಮತ್ತೆ ಕಲ್ಬುರ್ಗಿ ರಾಯಚೂರು ಬೆಂಗಳೂರು ರೈಲು ಸೇವೆಯನ್ನ ಆರಂಭಿಸಿದ.
ಬೆಂಗಳೂರಿನಿಂದ ರಾಯಚೂರು ಕಲಬುರಗಿಗೆ ಹೊರಡುವ ಜನರಿಗಾಗಿ, ಈ ವಿಶೇಷ ರೈಲು ಜು.15 ಸೋಮವಾರದಿಂದಲೇ ಸೇವೆ ಆರಂಭಿಸಲಿದೆ. ರೈಲು ಸಂಖ್ಯೆ 06589 ಇಂದು ರಾತ್ರಿ 8ಕ್ಕೆ ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟು ನಾಳೆ ಜುಲೈ 16ರಂದು ರಾಯಚೂರು ಮೂಲಕ ಬೆಳಗ್ಗೆ 7:45 ಕೈ ಕಲಬುರಗಿ ನಿಲ್ದಾಣ ತಲುಪಲಿದೆ. ಮರಳಿ ಕಲಬುರಗಿಯಿಂದ ಜುಲೈ 16ರಂದು ಮಂಗಳವಾರ ರೈಲು (ಸಂಖ್ಯೆ 06590) ಬೆಳಗ್ಗೆ 9.30ಗಂಟೆಗೆ ಹೊರಟು ಅದೇ ದಿನ ರಾತ್ರಿ 8:30 ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣ ಬಂದು ಸೇರಲಿದೆ.
ಈ ಒಂದು ರೈಲು (ಸಂಖ್ಯೆ 06597) ಬೆಂಗಳೂರಿನ ಯಶವಂತಪುರದಿಂದ ಜು.16 ರಂದು (ಮಂಗಳವಾರ) ರಾತ್ರಿ 11:50 ಕ್ಕೆ ಹೊರಟು ಮರುದಿನ ಬೆಳಗ್ಗೆ ಅಂದರೆ ಜುಲೈ 17ರಂದು 11.30 ಗಂಟೆಗೆ ಕಲಬುರಗಿ ರೈಲು ನಿಲ್ದಾಣ ತಲುಪುತ್ತದೆ. ಮರಳಿ ಕಲಬುರಗಿಯಿಂದ ಅದೇ ಅದೇ ದಿಕ್ಕಿನಲ್ಲಿ ಈ ವಿಶೇಷ ರೈಲು (ಸಂಖ್ಯೆ 06598) ಜುಲೈ 17 ರಂದು ಬುಧವಾರ ಮಧ್ಯಾಹ್ನ 1.30 ಗಂಟೆಗೆ ಬೆಂಗಳೂರಿನತ್ತ ಪ್ರಯಾಣ ಆರಂಭಿಸುತ್ತದೆ. ಅದೇ ದಿನ ರಾತ್ರಿ ಸುಮಾರು 11.55 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಲಿದೆ. ಬೆಂಗಳೂರು- ರಾಯಚೂರು- ಕಲಬುರಗಿ ವಿಶೇಷ ರೈಲು ಎಸ್‌ಎಂವಿಡಿ ಹಾಗೂ ಯಶವಂತಪುರದಿಂದ ಹೊರಟ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.