ಮಾನ್ವಿ : ಪಟ್ಟಣದ ಪತ್ರಿಕಾ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಧ್ಯಕ್ಷ ಕಿರಣ್ ಕುಮಾರ್ ತಡಕಲ್ ಮಾತನಾಡಿ ಬೆಳಗಾವಿಯಲ್ಲಿ ಡಿ.19ರಂದು ಚಳಿಗಾಲದ ಅಧಿವೇಶನಗಳು ನಡೆಯಲಿದ್ದು ಸದನದಲ್ಲಿ ನಿ.ನ್ಯಾ.ಏ.ಜೆ.ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಕೇಂದ್ರ ಸರಕಾರದಿಂದ 341(3) ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕೆ ತಿದ್ದಪಡಿ ತರಬೇಕು, ಮೀಸಲಾತಿ ಹೆಚ್ಚಿಸಿರುವ ರಾಜ್ಯಸರಕಾರದ ಪ್ರಸ್ತವನೆಯನ್ನು ಕೇಂದ್ರವು ಒಪ್ಪಿ ಶೇ17 ಮೀಸಲಾತಿಯನ್ನು ಅನುಷ್ಟಾನಗೊಳಿಸಬೇಕು, ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದಪಡಿ ತರಬೇಕು, ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾಯ್ದೆಯ ಕ್ಲಾಸ್ 7ಡಿ ಯನ್ನು ರದ್ದು ಪಡಿಸಬೇಕು ಹಾಗೂ ನಿ.ನ್ಯಾ.ಏ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳ್ಳಿಸುವಂತೆ ಒತ್ತಾಯಿಸಿ ಬೆಳಗಾವಿ ಚಲೋ ಸಾಮಾಜಿಕ ನ್ಯಾ ಸಂಕಲ್ಪ ರ‍್ಯಾಲಿಯನ್ನು ಡಿ.20ರಂದು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಿಂದ ಸುವರ್ಣ ಸೌಧದವರೆಗೆ ನಡೆಯಲಿದೆ ಎಂದು ತಿಳಿಸಿದರು.
ತಾ.ಅಧ್ಯಕ್ಷ ಮಾರೆಪ್ಪ ಮಳ್ಳಿ ಮಾತನಾಡಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರು ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]