K2kannadanews.in
Rewards scam ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಮಿತಿಮೀರಿ ಹೋಗಿದೆ. ರಿವಾರ್ಡ್ ಗಳ ಹೆಸರಲ್ಲಿ ಇದೀಗ ವಂಚನೆ ಮಾಡುವ ಪ್ರಕರಣ ಮತ್ತು ಜಾಲಗಳು ಪತ್ತೆಯಾಗಿದವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಹೆಸರು ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಎಸ್ಬಿಐ ಬ್ಯಾಂಕ್ನಿಂದ ರಿವಾರ್ಡ್ಸ್ ಬಂದಿರುವ ರೀತಿ ಮೆಸೇಜ್ ಕಳುಹಿಸಿ ವಂಚಿಸುತ್ತಿದ್ದಾರೆ.
ಹೀಗಾಗಿ ಎಕ್ಸ್ ಖಾತೆ ಪೋಸ್ಟ್ ಮೂಲಕ ಪಿಐಬಿ, ಬ್ಯಾಂಕ್ ಗ್ರಾಹಕರು ಅಪರಿಚಿತ ಫೈಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ, ಗ್ರಾಹಕರು ಎಚ್ಚರ ವಹಿಸಬೇಕು ಎಂದು ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಸೂಚಿಸಿದೆ. ಪಿಐಬಿ ಫ್ಯಾಕ್ಟ್ಚೆಕ್ ತನ್ನ ಎಕ್ಸ್ನಲ್ಲಿ ಬ್ಯಾಂಕ್ ಬಳಕೆದಾರರನ್ನು ಎಚ್ಚರಿಸಿದೆ. ಎಸ್ಬಿಐ ರಿವಾರ್ಡ್ಗಳನ್ನು ರಿಡೀಮ್ ಮಾಡಲು ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡಲು ಮತ್ತು ಇನ್ಸ್ಟಾಲ್ ನಿಮಗೆ ಸಂದೇಶ ಬಂದಿದೆಯೇ? ಒಂದು ವೇಳೆ ಬಂದಿದ್ದರೆ ಎಚ್ಚರ.
ಕಾರಣ ಎಸ್ಬಿಐ ಬ್ಯಾಂಕ್ ಎಂದಿಗೂ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಲಿಂಕ್ಗಳನ್ನು ಅಥವಾ ಎಪಿಕೆ ಫೈಲ್ಗಳನ್ನು ಡೌನ್ಲೋಡ್ ಅಥವಾ ಇನ್ಸ್ಟಾಲ್ ಮಾಡಲು ಕಳುಹಿಸುವುದಿಲ್ಲ ಎಂದು ಎಚ್ಚರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹಣಕಾಸು ವಂಚನೆಯ ಬಗ್ಗೆ ಗ್ರಾಹಕರನ್ನು ಎಚ್ಚರಿಸಲು ಕೃತಕ ಬುದ್ಧಿಮತ್ತೆ (Artificial intelligence) ಸಿಸ್ಟಮ್ ಪರಿಚಯಿಸಲು ಮುಂದಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಡಿಜಿಟಲ್ ವಂಚನೆಗಳಲ್ಲಿ ಸುಮಾರು 120.3 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.