
ರಾಯಚೂರು : ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದು, ರಾಜಕೀಯ ನಾಯಕರು ಮತಗಳ ಕ್ರೋಢೀಕರಣಕ್ಕೆ ಓಡಾಡುತ್ತಿದ್ದರೇ, ಇತ್ತ ಪ್ರಜೆಗಳು ಚುನಾವಣೆಯನ್ನೇ ಬಹಿಷ್ಕಾರಹಾಕುತ್ತಿದ್ದಾರೆ. ಎಲ್ಲೋ ಒಂದು ಕಡೆ ಇದು ಜಿಲ್ಲಾಡಳಿತಕ್ಕೆ ತಲೆನವಾಗಿ ಪರಿಣಮಿಸುವ ಎಲ್ಲಾ ಸೂಚನೆಗಳು ಕಾಣಿಸುತ್ತವೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊನ್ನಟಿಗಿ ಗ್ರಾಮದ ಜನರು ಚುನಾವಣೆಯನ್ನು ಪ್ರಸ್ತುತ ಬಹಿಷ್ಕಾರ ಹಾಕಿದ್ದಾರೆ. ಕಾರಣ 2018-19 ಸಾಲಿನಲ್ಲಿ ಆದರ್ಶ ಗ್ರಾಮವಾಗಿ ಈ ಗ್ರಾಮ ಆಯ್ಕೆಯಾಗಿದೆ. ಆದರೆ ಆದರ್ಶ ಗ್ರಾಮದಲ್ಲೆ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿವೆ. ಈ ಹಿನ್ನೆಲೆ ಗ್ರಾಮಸ್ಥರು ಪಕ್ಷಾತೀತವಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ. ತೆರೆದ ಬಾವಿಯಿಂದ ನೀರು ಸೇವನೆ, ಬಯಲು ಶೌಚಾಲಯ, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ಮನೆ ಮುಂದೆ ಕೊಚ್ಚೆ ನೀರು ಸಂಗ್ರಹವಾಗುತ್ತಿದ್ದು, ಇದರಿಂದ ರೋಗಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]