K2kannadanews.in
Local News ರಾಯಚೂರು : ಬಸ್ ನಿಲ್ದಾಣದಲ್ಲಿ ಚಾವಣಿ ಕುಸಿದು ಪ್ರಯಾಣಿಕರು ಅಲ್ಪದರಲ್ಲಿ ಪಾರಾದ ಘಟನೆ ಎಂದು ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರು ನಗರದ ಬಸ್ ನಿಲ್ದಾಣದ ಛಾವಣಿ
ಸಿಮೆಂಟ್ ಕುಸಿದು ಬಿದ್ದ ಘಟನೆ ಜರುಗಿದ್ದು. ನಿರಂತರ ಮಳೆಗೆ ಒದ್ದೆಯಾಗಿದೆ ಎನ್ನಲಾಗುತ್ತಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಕುಸಿದಿದ್ದ ಜಾಗದಲ್ಲೆ ಮತ್ತೆ ಕುಸಿದಿದ್ದು, ಇಲಾಖೆ ತಾತ್ಕಾಲಿಕ ಕೆಲಸ ಮಾಡಿದ್ದೆ ಘಟನೆಗೆ ಕಾರಣ ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.