ಸಂಚಲನ ಸೃಷ್ಟಿಸಿದ ಅವತಾರ 2 ಸಿದ್ಧವಾಗಿದೆ ಬಿಡುಗಡೆಗೆ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಮಾಂತ್ರಿಕ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮಾನವ ಜಗತ್ತೆ ಬೆರಗಾಗುವಂತಹ ಅದ್ಭುತ ಪ್ರಪಂಚವನ್ನು ದೃಶ್ಯಕಾವ್ಯದ ಮೂಲಕ ಸಿನಿ ಪ್ರೇಕ್ಷಕನ ಮುಂದೆ ತಂದಿಟ್ಟ ಮಹಾನ್ ಪ್ರತಿಭೆ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಅವತಾರ್ ಮುಂದುವರೆದ ಭಾಗ ಅವತಾರ್ 2 ಬಿಡುಗಡೆ ದಿನಾಂಕದ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ.
ವಿಶ್ವದಾದ್ಯಂತ ಅವತಾರ್ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಸಿನಿಮಾ ಇದೇ ತಿಂಗಳು ಅಂದ್ರೆ ಡಿಸೆಂಬರ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹಾಲಿವುಡ್ ಅವತಾರ್ ಸಿನಿಮಾದ ಬಗ್ಗೆ ವಿಶೇಷವಾಗಿ ಹೇಳೋದು ಏನೂ ಇಲ್ಲ. ಈ ಹಿಂದೆ 2009 ರಲ್ಲಿ ಪ್ರಾರಂಭವಾದ ಅವತಾರ್ ಡೈವ್ ಆಫ್ ವಾಟರ್‌ನ ಮುಂದುವರಿದ ಭಾಗವೇ ಅವತಾರ್ 2 ಚಿತ್ರ. ಇದೀಗ ಈ ಸಿನಿಮಾ ಡಿಸೆಂಬರ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈಗಾಗಲೇ ಅವತಾರ್ ಸಿನಿಮಾದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಸೆನ್ಸಾರ್ ಮುಗಿಸಿ, ಯು/ಎ ಪ್ರಮಾಣ ಪತ್ರ ಪಡೆದಿದೆ. ಅತ್ಯಂತ ದೀರ್ಘಾವದಿಯ ಸಿನಿಮಾ ಇದಾಗಿದ್ದು, ಸುಮಾರು 3 ಗಂಟೆ 12 ನಿಮಿಷ 10 ಸೆಕೆಂಡುಗಳಿಗೂ ಹೆಚ್ಚು ಡ್ಯೂರೆಷನ್ ಹೊಂದಿದೆ. ಈ ಚಿತ್ರದ ಎರಡು ಟ್ರೇಲರ್‌ಗಳು ಈಗಾಗಲೇ ಬಿಡುಗಡೆಯಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ, ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವ ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮತ್ತೊಮ್ಮೆ ದೃಶ್ಯಕಾವ್ಯದ ಮೂಲಕ ಪ್ರಪಂಚವನ್ನು ಗೆಲ್ಲಲು ಸಿದ್ದರಾಗಿದ್ದಾರೆ. ಅಲ್ಲದೆ, ಅವತಾರ್ 2 ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಬಿಡುಗಡೆಯಾಗಲಿದೆ. ಸುಮಾರು 237 ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಅವತಾರ್ ವಿಶ್ವಾದ್ಯಂತ 3 ಬಿಲಿಯನ್ ಯುಎಸ್ ಡಾಲರ್ ಕಲೆಕ್ಷನ್ ಮಾಡಿತ್ತು. ಅವತಾರ್ 2 ಎಷ್ಟು ಹಣ ಗಳಿಸಲಿದೆ ಅಂತ ಕಾಯ್ದು ನೋಡಬೇಕಿದೆ.
![]() |
![]() |
![]() |
![]() |
![]() |