ಪ್ರಯಾಣಿಕರೆ ಗಮನಿಸಿ ಬೆಂಗಳೂರು- ರಾಯಚೂರು- ಕಲಬುರಗಿ ವಿಶೇಷ ರೈಲು ಸೇವೆ..

K 2 Kannada News
ಪ್ರಯಾಣಿಕರೆ ಗಮನಿಸಿ ಬೆಂಗಳೂರು- ರಾಯಚೂರು- ಕಲಬುರಗಿ ವಿಶೇಷ ರೈಲು ಸೇವೆ..
WhatsApp Group Join Now
Telegram Group Join Now

K2kannadanews.in

Special train ರಾಯಚೂರು : ನೈರುತ್ಯ ರೈಲ್ವೆ ವತಿಯಿಂದ ಎಸ್‌ಎಂವಿಟಿ ಬೆಂಗಳೂರು -ಕಲಬುರಗಿ – ಎಸ್‌ಎಂವಿಟಿ -ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಗಣೇಶ ಚತುರ್ಥಿ ವೇಳೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಎಸ್‌ಎಂಇಟಿ ಬೆಂಗಳೂರು -ಕಲಬುರಗಿ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ಸೆಪ್ಟಂಬರ್ 5, 6 ಮತ್ತು 7ರಂದು ರಾತ್ರಿ 9:15ಕ್ಕೆ ಹೊರಟು ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸೆ. 7 ಮತ್ತು 8ರಂದು ಬೆಳಗ್ಗೆ 9:35ಕ್ಕೆ ಹೊರಟು ರಾತ್ರಿ 8ಗಂಟೆಗೆ ಎಸ್‌ಎಂವಿಟಿ ತಲುಪಲಿದೆ.

ಈ ರೈಲು 2 ಎಸಿ, 3 ಟೈರ್ ಕೋಚ್, 10 ಸ್ಲೀಪರ್ ಕ್ಲಾಸ್ ಕೋಚ್, 4 ಸೆಕೆಂಡ್ ಕ್ಲಾಸ್ ಕೋಚ್ ಮತ್ತು ಎರಡು ಲಗೇಜ್ ಬಾಕ್ಸ್  ಒಳಗೊಂಡಿರುತ್ತದೆ. ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು ಜಂಕ್ಷನ್, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

WhatsApp Group Join Now
Telegram Group Join Now
Share This Article