
ಸಿರವಾರ : ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಲ್ಲಟ ಗ್ರಾಮದ ಹತ್ತಿರವಿರುವ ಸೋಲಾರ ಪವರ್ ಪ್ಲಾಂಟ್ ಬಳಿ ನಡೆದಿದೆ.
ಹೌದು ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಬಳಿಯ ರಾಯಚೂರು ಲಿಂಗಸಗೂರು ಹೆದ್ದಾರಿ ಪಕ್ಕದಲ್ಲಿ ಬರುವ ಸೋಲಾರ್ ಪವರ್ ಪ್ಲಾಂಟ್ ಬಳಿ ಕವಿತಾಳ ಪಟ್ಟಣದ ಶಿವು ಎಂಬುವ ವ್ಯಕ್ತಿಯ ಮೇಲೆ ಮಾರಣಂತಿಕವಾಗಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದೆ. ಮುಖಕ್ಕೆ ಕಲ್ಲು ಆಯುಧಗಳನ್ನು ಬಳಸಿ ಚಚ್ಚಲಾಗಿದೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ ಇಬ್ಬರೂ ದುಷ್ಕರ್ಮಿಗಳಿಂದ ಈ ಒಂದು ಕೃತ್ಯ ಎಸಗಲಾಗಿದೆ ಇನ್ನುತ್ತಿದ್ದಾರೆ. ಮರಣಾಂತಿಕವಾಗಿ ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆಯ ಸಂಬಂಧಪಟ್ಟಂತೆ ಕವಿತಾಳ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳ ಭೇಟಿ ಮಾಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]