K2kannadanews.in
car stuck in highway ಕವಿತಾಳ : ಜಿಲ್ಲಾಧಿಕಾರಿ ಕಚೇರಿಯ (DC office) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (Engineer’s) ಹೊಗುತ್ತಿದ್ದ ಕಾರು (Car) ರಸ್ತೆ ಗುಂಡಿಯಲ್ಲಿ (stuck in highway) ಸಿಕ್ಕಿ ಹಾಕಿಕೊಂಡ ಘಟನೆ ಕವಿತಾಳ ಪಟ್ಟಣದ ಮಧ್ಯದಲ್ಲಿ ಹಾದುಹೋದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಕವಿತಾಳ (Kavitala) ಪಟ್ಟಣದಲ್ಲಿ ಘಟನೆ ಗುರುವಾರ ಜರುಗಿದ್ದು, ಪರಿಣಾಮ ಕಾರಿನಲ್ಲಿದ್ದ ಅಧಿಕಾರಿಗಳು (Officers) ಪರದಾಡಿದರು. ರಸ್ತೆ (Road) ಗುಂಡಿಗೆ ಇಳಿದ ಕಾರು ಮುಂದೆ ಚಲಿಸದ ಕಾರಣ ಕಾರಿನಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಫಿಯುದ್ದೀನ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ಕೃಷ್ಣ ಮತ್ತು ನರಸಮ್ಮ ಕಾರಿನಿಂದ ಇಳಿದು ನಡು ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಇನ್ನು ಈ ಒಂದು ಘಟನೆಯು ಅವಜ್ಞಾನಿಕ ಕಾಮಗಾರಿಗಳಿಗೆ ಹಿಡಿದ ಕೈಗನ್ನಡಿಯಂತಿತ್ತು.
ಅವೈಜ್ಞಾನಿಕ ಡಿವೈಡರ್ ಹಾಕಿದ್ದರಿಂದ ಲಿಂಗಸುಗೂರು, ರಾಯಚೂರು ರಾಜ್ಯ ಹೆದ್ದಾರಿ ಕಿರಿದಾಗಿದೆ. ವಾಹನ ದಟ್ಟಣೆಯಿಂದ ಆಳವಾದ ಗುಂಡಿಗಳು ಬಿದ್ದಿವೆ. ಮಳೆ ನೀರು ನಿಂತ ಪರಿಣಾಮ ರಸ್ತೆಯಲ್ಲಿ ತಗ್ಗು ಕಾಣದೆ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಅಧಿಕಾರಿಗಳ ಅಸಹಾಯಕತೆ ಗಮನಿಸಿ ನೆರವಿಗೆ ಬಂದ ಆಟೊ ಚಾಲಕರು ಮತ್ತು ಸಾರ್ವಜನಿಕರು ಕಾರನ್ನು ಗುಂಡಿಯಿಂದ ಮೇಲೆತ್ತಿದರು. ಇದೀಗ ಅಧಿಕಾರಿಗಳಿಗೆ ರಸ್ತೆ ದುಸ್ಥಿತಿ ಅರಿವಿಗೆ ಬಂದಿದ್ದು ಈಗಲಾದರೂ ದುರಸ್ತಿಗೆ ಮುಂದಾಗಬಹುದು ಎಂದು ಸ್ಥಳೀಯರು ಮಾತನಾಡಿಕೊಂಡರು.