This is the title of the web page
This is the title of the web page
Crime News

ಮಗಳನ್ನು ಭುಜದ ಹೊತ್ತೊಯ್ಯುತ್ತಿದ್ದ ತಂದೆಗೆ ಗುಂಡಿಟ್ಟ ದುಷ್ಕರ್ಮಿ


K2 ಕ್ರೈಂ ನ್ಯೂಸ್ : ಪುಟ್ಟ ಕಂದಮ್ಮನನ್ನು ಭುಜದ ಮೇಲೆ ಕೂರಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ತಂದೆಗೆ ಗುಂಡು ಹಾರಿಸಿದ ಭಯಾನಕ ಘಟನೆ ನಡೆದಿದೆ.

ದಾಳಿಗೊಳಗಾದ ವ್ಯಕ್ತಿಯನ್ನು ಶೋಯೆಬ್(28) ಎಂದು ಗುರುತಿಸಲಾಗಿದೆ. ತನ್ನ ಒಂದೂವರೆ ವರ್ಷದ ಮಗಳನ್ನು ಭುಜದ ಮೇಲೆ ಹೊತ್ತು ನಡೆದುಕೊಂಡು ಹೋಗುತ್ತಿದ್ದಾಗಲೇ ಅವರಿಗೆ ಗುಂಡು ಹಾರಿಸಲಾಗಿದೆ.

ಪಾಯಿಂಟ್ ಬ್ಲ್ಯಾಂಕ್ ರೇಂಜ್‌ನಲ್ಲಿ ಗುಂಡು ಹೊಡೆದ ದುಷ್ಕರ್ಮಿ, ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಕೂಡಲೇ ಅವರನ್ನು ರಾಯ್ ಬರೇಲ್ವಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಬಿದ್ದ ರಭಸಕ್ಕೆ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನು ಘಟನೆಯು ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.


[ays_poll id=3]