This is the title of the web page
This is the title of the web page
Local NewsVideo News

ಈ ಹೂವು ಅರಳುವುದು ನೋಡಿದ್ರೆ ಇಷ್ಟಾರ್ಥಗಳು ಈಡೇರುತ್ತವೆಯಂತೆ..


ರಾಯಚೂರು : ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಅಪರೂಪದ ಬ್ರಹ್ಮಕಮಲ ಹೂವು ಶ್ರೀರಾಮನಗರ ನಿವಾಸಿಗಳಾದ ಅಯ್ಯನಗೌಡ ಅವರ ಮನೆಯಲ್ಲಿ ಅರಳಿದೆ.

ರಾಯಚೂರು ನಗರದ ಶ್ರೀರಾಮನಗರ ಕಾಲೋನಿಯ ನ್ಯಾಯವಾದಿ ಅಯ್ಯನಗೌಡ ಗೊಲದಿನ್ನಿ ಮನೆಯ ಅಂಗಳದಲ್ಲಿ ಅರಳಿದೆ. ಮೂರು ತಿಂಗಳ ಕೆಳಗೆ ನೆಟ್ಟಿದ್ದ ಗಿಡದಲ್ಲಿ ಬಿಟ್ಟಿದ್ದ ಹೂ ಅರಳಿದೆ. ಅಪರೂಪಕ್ಕೆ ಹೂಬಿಡುವ ಗಿಡದಲ್ಲಿ ಬ್ರಹ್ಮಕಮಲ ಅರಳಿರುವ ಹಿನ್ನಲೆ ಗೌರಮ್ಮ ಅಯ್ಯನಗೌಡ ದಂಪತಿ ಬ್ರಹ್ಮಕಮಲಕ್ಕೆ ಪೂಜೆಯನ್ನ ಸಲ್ಲಿಸಿದ್ದಾರೆ.

ಗಣಪತಿಯ ಕತ್ತರಿಸಿದ ಮೆದುಳಿನ ಮೇಲೆ ಶಿವ ಬ್ರಹ್ಮಕಮಲದಿಂದ ನೀರನ್ನು ಚಿಮುಕಿಸಿದ್ದಾನೆ ಎಂದು ಪುರಾಣದಲ್ಲಿ ನಂಬಲಾಗಿದೆ. ಆದ್ದರಿಂದಲೇ ಈ ಹೂವಿಗೆ ವಿಶೇಷ ಮಹತ್ವವಿದೆ. ಹಿಮಾಲಯದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬ್ರಹ್ಮ ಕಮಲ ಹೂವು ಅರಳುವುದನ್ನು ನೋಡಿದವರಿಗೆ ಇಷ್ಟಾರ್ಥಗಳು ಈಡೇರುತ್ತವೆ, ಅನ್ನೊ ಪ್ರತೀತಿ ಇರುವುದರಿಂದ ಬ್ರಹ್ಮ ಕಮಲಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.


[ays_poll id=3]