ಈ ಊರಲ್ಲಿ ಮಳೆನೇ ಆಗಿಲ್ಲವಂತೆ : ಮಳೆರಾಯನ ಮೆಚ್ಚಿಸೋಕೆ ಭಜನೆ ಮೊರೆ..?

K 2 Kannada News
ಈ ಊರಲ್ಲಿ ಮಳೆನೇ ಆಗಿಲ್ಲವಂತೆ : ಮಳೆರಾಯನ ಮೆಚ್ಚಿಸೋಕೆ ಭಜನೆ ಮೊರೆ..?
WhatsApp Group Join Now
Telegram Group Join Now

K2kannadanews.in

Sapta bhajan ದೇವದುರ್ಗ : ರಾಯಚೂರು ಜಿಲ್ಲೆಯಾದ್ಯಂತ ಕಳೆದ ಎರಡು (Last 2days) ದಿನಗಳಿಂದ ಉತ್ತಮ ಮಳೆಯಾಗುತ್ತಿದೆ (Rain). ಆದರೆ ಈ ಒಂದು ಗ್ರಾಮದಲ್ಲಿ (This village) ಮಾತ್ರ ಇನ್ನೂ ಮಳೆರಾಯನ ಆಗಮನವಾಗಿಲ್ಲ (No rain). ಹಾಗಾಗಿ ಮಳೆರಾಯನ ಮೆಚ್ಚಿಸಲು ಸಪ್ತಭಜನೆ ಕಾರ್ಯಕ್ರಮ ಮಾಡುತ್ತಿದ್ದಾರೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಜಾಗಟಗಲ್ ಗ್ರಾಮದಲ್ಲಿ, ರಾಚಯಪ್ಪ ತಾತನ ಗದ್ದುಗೆ ಮುಂದೆ ಮಳೆಗಾಗಿ ಪ್ರಾರ್ಥಿಸಿ ರೈತರು ಇಂದಿನಿಂದ ಸಪ್ತ ಭಜನೆ ಆರಂಬಿಸಿದ್ದಾರೆ. ರಾಜ್ಯದಲ್ಲಿ ಒಂದೆಡೆ ಅತೀವೃಷ್ಠಿ ಉಂಟಾಗಿದ್ದು, ಮತ್ತೊಂದೆಡೆ ಮಳೆಗಾಗಿ ಪೂಜೆ ಸಲ್ಲಿಸಲಾಗುತ್ತಿದೆ. ಜಾಗಟಗಲ್ ಗ್ರಾಮದಲ್ಲಿ ಏಳು ದಿನಕಾಲ ಸತತ ವಾಗಿ ಭಜನೆಯನ್ನು ಭಕ್ತರು ನಡೆಸುತ್ತಾರೆ.

ಏಳು ಜನರಿರುವ ತಂಡದಿಂದ ಶಿವನಾಮ ಸ್ಮರಣೆ ಮಾಡಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಹೀಗೆ ಆರು ತಂಡಗಳಿಂದ ನಿರಂತರವಾಗಿ ಹಗಲು ರಾತ್ರಿ ಶಿವನಾಮ ಸ್ಮರಣೆ ಮಾಡಲಾಗುತ್ತದೆ. ಈ ಮೂಲಕ ಉತ್ತಮ ಮಳೆ ಬರಲಿ ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article