ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸಿ ಕ್ರಮಕ್ಕೆ ಒತ್ತಾಯ
![]() |
![]() |
![]() |
![]() |
![]() |
ರಾಯಚೂರು : ವಿಷ ಕುಡಿಸಿ ಕೊಲೆ ಮಾಡದ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ದೂರು ದಾಖಲಿಸಿಕೊಂಡು ಅನ್ಯಾಯ ಮಾಡಿದ್ದು, ಈ ಕೂಡಲೇ ಕೊಲೆ ಪ್ರಕರಣ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿರುಪತಿ ಇಬ್ರಾಹಿಂದೊಡ್ಡಿ ಅವರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು ತಾಲೂಕಿನ ಇಬ್ರಾಹಿಂದೊಡ್ಡಿ ಗ್ರಾಮದಲ್ಲಿ ಮಹಾದೇವಿ ಎನ್ನುವವರಿಗೆ ಡಿ.3 ರಂದು ವಿಷ ಕುಡಿಸಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಚೇತರಿಸಿಕೊಂಡಾಗ ಮಹಾದೇವಿ ಅವರಿಂದ
ಗ್ರಾಮೀಣ ಪೋಲೀಸರು ಹೇಳಿಕೆ ಪಡೆದುಕೊಂಡು ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂದು ಹೇಳಿಕೆಯನ್ನಯ ಪೋಲಿಸ್ ಪಡೆದುಕೊಂಡಿದ್ದಾರೆ, ಆದರೆ ಹೇಳಿಕೆಯನ್ನು ಮರೆಮಾಚಿ ಸಾಮಾನ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಹಾದೇವಿ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಶವ ಸಂಸ್ಕಾರ ನಂತರ ದೂರು ನೀಡಲು ಹೋದಾಗ ಈಗಾಗಲೇ ದೂರು ಪಡೆದಿದ್ದೇವೆ ಮರು ದೂರು ಪಡೆಯಲು ಸಾಧ್ಯವಿಲ್ಲವೆಂದು ಕಳುಹಿಸಿದ್ದಾರೆ, ಈ ಕುರಿತು ಎಸ್ಪಿ ಅವರಿಗೆ ಮನವಿ ಮಾಡಿದ್ದು, ಈ ದೂರಿನಲ್ಲಿ 7 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಕೇವಲ ಇಬ್ಬರನ್ನು ಬಂಧಿಸಿದ್ದಾರೆ, ಉಳಿದ 5 ಜನರನ್ನು ಬಂಧಿಸಬೇಕು ಎಂದು ಮನವಿ ಮಾಡಿದರು. 5 ಜನ ಆರೋಪಿಗಳು ಮನೆಗೆ ಬಂದು ದೂರು ಹಿಂಪಡೆಯಲು ಮನೆಗೆ ಬಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ, ಇವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
![]() |
![]() |
![]() |
![]() |
![]() |