This is the title of the web page
This is the title of the web page
Local News

ಕಲೆ ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೆ


ಮಾನ್ವಿ : ಏಕಲವ್ಯ ದೊಡ್ಡಾಟ ಸಂಘ ತಡಕಲ್ ಗ್ರಾಮೀಣ ಸೊಗಡಿನ ಕಲೆ, ಸಾಹಿತ್ಯ, ಬಯಲಾಟ, ಸಂಸ್ಕೃತಿ ಮತ್ತು ಬಯಲಾಟದಂತಹ ನಾಟಕಗಳ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಸದ್ಗುರು ಅಬ್ಬಾಸಲಿ ತಾತಾ ಗೋನ್ವಾರ್ ಹೇಳಿದರು.

ತಾಲೂಕಿನ ಜೀನೂರು ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಸಹಯೋಗದಲ್ಲಿ ಏಕಲವ್ಯ ದೊಡ್ಡಾಟ ಸಂಘ ತಡಕಲ್ ವತಿಯಿಂದ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ, 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಏಕಲವ್ಯ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಹಿನ್ನಲೆಯನ್ನು ಸಾರುವ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜಾನಪದ, ದೊಡ್ಡಾಟ, ತತ್ವಪದ, ಪ್ರವಚನ, ಸುಗಮ ಸಂಗೀತ, ದಾಸವಾಣಿ, ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲೆಗಳನ್ನು ಪ್ರದರ್ಶಿಸುವುದು ಮತ್ತು ಮುಂದಿನ ಪೀಳಿಗೆಯವರಿಗೆ ನಮ್ಮ ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸುವುದು ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ಹಾಗೂ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿರುವ ಏಕಲವ್ಯ ದೊಡ್ಡಾಟ ಸಂಘ ತಡಕಲ್ ಕಾರ್ಯ ಅಭಿನಂದನೀಯ ಮತ್ತು ಈ ಭಾಗದ ಕಲಾ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಕಲೆಯನ್ನು ಪ್ರದರ್ಶಿಸುವ ಕಲಾ ಸೇವೆಗೆ ಮುಂದಾಗಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಅಬ್ಬಾಸಲಿ ತಾತಾನವರು ಹೇಳಿದರು.


[ays_poll id=3]