This is the title of the web page
This is the title of the web page
State News

ರೈಲ್ವೇ ಇಲಾಖೆಯಲ್ಲಿ 2422 ಅಪ್ರೆಂಟಿಸ್​ಗಳ ನೇಮಕಾತಿಗೆ ಅರ್ಜಿ


K2 ಜಾಬ್ ನ್ಯೂಸ್ : 2422 ಅಪ್ರೆಂಟಿಸ್​ಗಳ ನೇಮಕಾತಿಗೆ ಭರ್ತಿಗೆ ಕೇಂದ್ರ ರೈಲ್ವೇ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅಭ್ಯರ್ಥಿಗಳು ಜನವರಿ 15, 2023ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಮುಂಬೈ ಕ್ಲಸ್ಟರ್‌ : 1659 ಹುದ್ದೆಗಳು, ಭೂಸಾವಲ್ ಕ್ಲಸ್ಟರ್- 418.
ಪುಣೆ ಕ್ಲಸ್ಟರ್- 152.
ನಾಗ್ಪುರ ಕ್ಲಸ್ಟರ್- 114 ಹುದ್ದೆಗಳು.
ಸೊಲ್ಲಾಪುರ ಕ್ಲಸ್ಟರ್- 79 ಹುದ್ದೆಗಳಿಗೆ ಸೇರಿದಂತೆ ಒಟ್ಟ 2422 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು RRC CR ನ ಅಧಿಕೃತ ವೆಬ್‌ಸೈಟ್ rrccr.com ಮೂಲಕ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ : ಕೇಂದ್ರ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಯು 10ನೇ ತರಗತಿಯ ಪರೀಕ್ಷೆಯನ್ನು ಅಥವಾ ಅದಕ್ಕೆ ಸಮಾನವಾದ ಕನಿಷ್ಠ 50% ನೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ : ಅರ್ಜಿ ಶುಲ್ಕ 100 ರೂ. ಪಾವತಿ ಗೇಟ್‌ವೇ ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಯನ್ನು ಮಾಡಬೇಕಾಗುತ್ತದೆ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್/SBI ಚಲನ್ ಇತ್ಯಾದಿಗಳನ್ನು ಬಳಸಿಕೊಂಡು ಪಾವತಿಯನ್ನು ಮಾಡಬಹುದು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು RRC ಯ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಅಲ್ಲದೇ 15-12-2022 ಕ್ಕೆ 24 ವರ್ಷ ಮೀರಿರಬಾರದು. ಇನ್ನು SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 05 ಹಾಗೂ OBC ವರ್ಗಕ್ಕೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.


[ays_poll id=3]