This is the title of the web page
This is the title of the web page
Local News

ನೀರಾವರಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಲು ಮನವಿ


ರಾಯಚೂರು : ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಮುಂದುವರಿಸಲು ಹೆಕ್ಟರ್ ಆಧಾರಿತ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತುಂಗಭದ್ರಾ ಎಡದಂಡೆ ನಾಲೆ ಯರಮರಸ್ ವೃತ್ತದ ನೀರು ನಿರ್ವಹಣೆಗೆ ಒಟ್ಟು 748 ಕಾರ್ಮಿಕರು ದುಡಿಯುತ್ತಿದ್ದು, 28 ವರ್ಷಗಳಿಂದ ದಿನಗೂಲಿ ಗಳಾಗಿದ್ದು ಇವರನ್ನ 2018ರಲ್ಲಿ ಹೊರಗುತ್ತಿಗೆ ಒಳಪಡಿಸಲಾಯಿತು. ತದನಂತರ ಅನುದಾನದ ಕೊರತೆಯ ಹೆಸರಲ್ಲಿ ಕ್ಲೋಸರ್ ಅವಧಿಯ ತಿಂಗಳುಗಳಲ್ಲಿ ಕೆಲಸ ನೀಡುತ್ತಿಲ್ಲ. ದಕ್ಷಿಣ ಕರ್ನಾಟಕದ ಕಾವೇರಿ ನೀರಾವರಿ ನಿಗಮಕ್ಕೆ ದುರಸ್ತಿ ಹಾಗೂ ನಿರ್ವಹಣೆ ವೆಚ್ಚವನ್ನು ಪ್ರತಿ ಹೆಕ್ಟೇರ್ ಗೆ 900 ನೀಡಲಾಗುತ್ತದೆ. ಆದರೆ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಕ್ಕೆ ಹೆಕ್ಟೇರ್ ಗೆ ಕೇವಲ 600 ಅನುದಾನ ನೀಡಲಾಗುತ್ತಿದೆ. ಇದು ರಾಜ್ಯ ಸರ್ಕಾರ ಜಲ ಸಂಪನ್ಮೂಲ ಇಲಾಖೆ ಮಾಡುತ್ತಿರುವ ತಾರತಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸನಬದ್ಧ ಸೌಲಭ್ಯಗಳಾದ ಭವಿಷ್ಯ ನಿಧಿ, ಇಎಸ್ಐ ಶೇಕಡ 70ರಷ್ಟು ಪಾವತಿ ಆಗಿರುವುದಿಲ್ಲ. ಪ್ರತಿ ತಿಂಗಳು ಸಂಬಳ ಪಾವತಿ ಮಾಡುತ್ತಿಲ್ಲ. ದುರಸ್ತಿ ಹಾಗೂ ನಿರ್ವಹಣೆ ಅನುದಾನದಲ್ಲಿ ತಾರತಮ್ಯವಿದೆ. ಸಿಕ್ಕ ಅನುದಾನದಲ್ಲೂ ಕಾರ್ಮಿಕರ ವೇತನಕ್ಕೆ ಆದ್ಯತೆ ನೀಡುತ್ತಿಲ್ಲ ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಕಾಮಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.


[ays_poll id=3]