ಫಿಫಾ ವರ್ಲ್ಡ್‌ಕಪ್ ಕವರ್ ಮಾಡುತ್ತಿರುವ ಮತ್ತೊಬ್ಬ ಪತ್ರಕರ್ತ ಸಾವು : ಹೆಚ್ಚಿದ ಅನುಮಾನಗಳು
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಫಿಫಾ ವರ್ಲ್ಡ್ ಕಪ್ ನಲ್ಲಿ ಎರಡನೇ ಪತ್ರಕರ್ತ ಮೃತಪಟ್ಟಿದ್ದು ಈ ಸಾವಿನಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ತಾರ್‌ನಲ್ಲಿ ನಡಿತಿರೋ ಫಿಫಾ ವರ್ಲ್ಡ್‌ಕಪ್ ಕವರ್ ಮಾಡೋ ವೇಳೆ ಮತ್ತೊಬ್ಬ ಪತ್ರಕರ್ತ ಸಾವನ್ನಪ್ಪಿದ್ದಾರೆ. ಅಮೆರಿಕದ ಪತ್ರಕರ್ತ ಸಾವನ್ನಪ್ಪಿದ ಎರಡೇ ದಿನಕ್ಕೆ ಈ ಘಟನೆ ನಡೆದಿದೆ. ಖಲೀದ್ ಅಲ್ ಮಿಸ್ಲಾಮ್ ಅನ್ನೋ ಕತಾರಿನ ಪತ್ರಕರ್ತ ಸಾವನ್ನಪ್ಪಿರೊ ದುರ್ದೈವಿ. ಇವ್ರೂ ಕೂಡ ಫಿಫಾ ವರ್ಲ್ಡ್‌ಕಪ್ ಕವರ್ ಮಾಡೋ ವೇಳೆ ಹಠಾತ್ತನೆ ಮೃತಪಟ್ಟಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇವರ ಸಾವಿಗೆ ಸರಿಯಾದ ಕಾರಣ ಇನ್ನು ಗೊತ್ತಾಗ್ಬೇಕಿದೆ ಅಂತ ಖಲೀದ್ ಕೆಲಸ ಮಾಡ್ತಿದ್ದ ಟಿವಿ ಚಾನೆಲ್ ಹೇಳಿದೆ. ಈ ಬಗ್ಗೆ ಕತಾರ್ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ ಹಾಗಾಗಿ ಇವ್ರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
![]() |
![]() |
![]() |
![]() |
![]() |