K2kannadanews.in
Bus accident ಸಿಂಧನೂರು : ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಭೀಕರ ಬಸ್ ಅಪಘಾತ (Bus accident) ಜರುಗಿದೆ. ನಿಂತಿದ್ದ ಸಾರಿಗೆ ಬಸ್ಸಿಗೆ (KKRTC bus) ಹಿಂಬದಿಯಿಂದ ಖಾಸಗಿ ಬಸ್ಸೊಂದು (Privet bus) ಡಿಕ್ಕಿ ಹೊಡೆದ ಪರಿಣಾಮ ಖಾಸಿಗೆ ಬಸ್ ಚಾಲಕ (Driver death) ಸ್ಥಳದಲ್ಲಿ ಮೃತಪಟ್ಟ ಘಟನೆ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಹಾರಾಪುರ ಗ್ರಾಮದ ಬಳಿ ಘಟನೆ ಜರುಗಿದೆ. ಬೆಂಗಳೂರಿನಿಂದ (Benglore to Yadgiri) ಯಾದಗಿರಿ ಕಡೆಗೆ ಹೊರಟಿದ್ದ ಸರ್ಕಾರಿ ಬಸ್‌ಗ ಪ್ರಯಾಣಿಕರೊಬ್ಬರನ್ನ ಇಳಿಸಲು ನಿಂತಿತ್ತು. ಈ ವೇಳೆ ಅದೇ ಮಾರ್ಗದಲ್ಲಿ (Route) ಬರುತ್ತಿದ್ದ ಖಾಸಗೀ ಬಸ್ ನಿಂತಿದ್ದ ಸಾರಿಗೆ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸರ್ಕಾರಿ ಬಸ್ ರಸ್ತೆಯಿಂದ (Road) ಕೆಳಗೆ ಇಳಿದಿದೆ. ಅಪಘಾತದಲ್ಲಿ ಎರಡೂ ಬಸ್‌ಗಳು ಜಖಂಗೊಡಿದ್ದು, ಅದೃಷ್ಟವಶಾತ್ ಸಾರಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು (Passengers) ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಖಾಸಗಿ ಬಸ್ ಚಾಲಕ ಪುಂಡಲಿಕ (37) ಸ್ಥಳದಲ್ಲೆ ಮೃತಪಟ್ಟಿದ್ದು, ಶವ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ (Hospital) ಶವ ಸಾಗಿಸಲಾಗಿದೆ. ಖಾಸಗಿ ಬಸ್ ನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಕೈ ಮುರಿದ್ದಿದ್ದು, 5 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ತರ್ವಿಹಾಳ ಪೊಲೀಸ್ (police) ಸಿಬ್ಬಂದಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದು ಪ್ರಕರಣ (Case) ದಾಖಲಿಸಿಕೊಂಡಿದ್ದಾರೆ.