K2kannadanews.in
Local News ಮುದುಗಲ್ : ಅಂಕಲಿಮಠ – ಮಂಗಳೂರು ಸಾರಿಗೆ ಬಸ್ ಹೂನೂರು ಗ್ರಾಮದಲ್ಲಿನ ಚಿಕ್ಕ ಚರಂಡಿಯಲ್ಲಿ ಸಿಲುಕಿಕೊಂಡ ಘಟನೆ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ ಘಟನೆ ಜರುಗಿದೆ. ಸಿಸಿ ರಸ್ತೆ ಮಾಡದೆ ಇರುವದು ಈ ಅವಘಡಕ್ಕೆ ಕಾರಣವಾಗಿದೆ ಎಂದು ಹೂನೂರು ಗ್ರಾಮಸ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಮಳೆಯಾದರೆ ಸಾಕು ಈ ರಸ್ತೆ ಕೆಸರುಗದ್ದೆಯಾಗಿ ವಾಹನ ಸವಾರರಿಗೆ ಸಂಚಾರ ಮಾಡಲು ಹಾಗೂ ಗ್ರಾಮದ ಜನರಿಗೆ ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಚಾಲಕನ ಸಮಯ ಪ್ರಜ್ಞೆ ಯಿಂದ ಅದೃಷ್ಟವಶ ಬಸ್ ನಲ್ಲಿ ಇರುವ ಪ್ರಯಾಣಿಕರಿಗೆ ಯಾವುದೇ ಅನಾಹುತ ಆಗಿಲ್ಲ.