ಲವ್ ಮ್ಯಾರೇಜ್ : ಮನೆಯವರಿಂದ ದಾಳಿಗೆ ಅಂಜಿ, ಲೈವ್ ವೀಡಿಯೋ ಮೂಲಕ ಆತ್ಮಹತ್ಯೆಗೆ ಯತ್ನ..

K 2 Kannada News
ಲವ್ ಮ್ಯಾರೇಜ್ : ಮನೆಯವರಿಂದ ದಾಳಿಗೆ ಅಂಜಿ, ಲೈವ್ ವೀಡಿಯೋ ಮೂಲಕ ಆತ್ಮಹತ್ಯೆಗೆ ಯತ್ನ..
WhatsApp Group Join Now
Telegram Group Join Now

K2kannadanews.in

Crime News ವೈರಲ್ ವೀಡಿಯೋ : ಇತ್ತೀಚಿಗಷ್ಟೇ ಪ್ರೇಮಿಗಳಿಗೆಬ್ಬರು ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದರು. ಆಶ್ರಯ ನೀಡಿದವರ ಮನೆ ಮೇಲೆ ಹಲ್ಲೆ ನಡೆಸಿ ಆಸ್ತಿ ಧ್ವಂಸ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ ಮನೆಯವರು, ಮನನೊಂದು ನವ ದಂಪತಿ ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವೀಡಿಯೋ ವೈರಲ್ ಆಗಿದೆ.

ಈ ಕುರಿತ ಪೋಸ್ಟ್ ಒಂದನ್ನು ChotaNews ಹೆಸರಿನ ಎಕ್ಸ್ ಖಾತೆಯಲ್ಲಿ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಕುಟುಂಬಸ್ಥ ಕಿರುಕುಳದಿಂದ ಮನನೊಂದ ನವ ದಂಪತಿ ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ ಎಂದು ಹೇಳಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದೃಶ್ಯವನ್ನು ಕಾಣಬಹುದು. ಘಟನೆಯು ತೆಲಂಗಾಣದ ಜಂಗಾರೆಡ್ಡಿಗುಡೆಂ ಮಂಡಲದ ಅಕ್ಕಂಪೇಟೆಯಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ.

ಇತ್ತೀಚಿಗಷ್ಟೇ ಪ್ರೇಮಿಗಳು ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಎರಡೂ ಮನೆಯವರೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ಮಾತು ಧಿಕ್ಕರಿಸಿ ಇಬ್ಬರೂ ಮದುವೆಯಾಗುತ್ತಾರೆ. ನವ ದಂಪತಿಗಳಿಗೆ ಜೋಡಿಗಳಿಗೆ ರಾಜು ಎಂಬ ವ್ಯಕ್ತಿ ಆಶ್ರಯ ನೀಡಿದ್ದ, ವಿಷಯ ತಿಳಿದ ಯುವತಿ ಮನೆವವರು ರಾಜು ಕುಟುಂಬದವರ ಮೇಲೆ ಹಲ್ಲೆ ನಡೆಸಿ ಆಸ್ತಿ ಧ್ವಂಸ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಸಿದ್ದಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article