![]() |
![]() |
![]() |
![]() |
![]() |
ಸಿಂಧನೂರು : 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಸದ್ಬಳಕೆ ಮಾಡಿಕೊಂಡ ಅರ್ಧ ಗಂಟೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಮಂಗಮ್ಮ ರಾಜಪ್ಪ (82) ಎಂಬ ವೃದ್ದೆ ಮತದಾನ ಮಾಡಿ ಮೃತಪಟ್ಟಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಪಿಆರ್‌ಒ ದಿನೇಶ ಕೆ.ಪಿ. ಹಾಗೂ ಎಪಿಆರ್‌ಒ ಬಸಪ್ಪ ಎಚ್. ಹಾಗೂ ಸಿಬ್ಬಂದಿ, ಮಂಗಮ್ಮ ಅವರ ಮನೆಗೆ ಮಧ್ಯಾಹ್ನ 12.19 ಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಅಜ್ಜಿಯು ಮತಪತ್ರ ಸಂಖ್ಯೆ 349 ರಲ್ಲಿ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ 12.50ಕ್ಕೆ ಅಜ್ಜಿ ನಿಧನ ಹೊಂದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಅರುಣ್ ಎಚ್.ದೇಸಾಯಿ ತಿಳಿಸಿದ್ದಾರೆ. ವೃದ್ಧೆ ಮಂಗಮ್ಮ ರಾಜಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಆರೋಗ್ಯ ಸಾಕಷ್ಟು ಕ್ಷೀಣಿಸಿತ್ತು. ಹೀಗಾಗಿ, ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಚುನಾವಣಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]