K2kannadanews.in
Mahakumbh Mela ನ್ಯೂಸ್ ಡಸ್ಕ್ : ಈ ಬಾರಿಯ ಕುಂಭಮೇಳದಲ್ಲಿ ಸಾಕಷ್ಟು ಕುತುಹಲ, ವಿಶೇಷತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಓರ್ವ ಅಘೋರಿ ವಿಷಪೂರಿತ ಹಾವು, ತಲೆಬುರುಡೆ ಹಾಕಿಕೊಂಡು ಬಂದ ವೀಡಿಯೋ ಎಕ್ಸ್ ವೈರಲ್ ಆಗುತ್ತಿದೆ.
ಹೌದು ಉತ್ತರಪ್ರದೇಶದ ಕುಂಭಮೇಳದಲ್ಲಿ ಸಾಕಷ್ಟು ವಿಷಪೂರಿತ ಹಾವು, ತಲೆಬುರುಡೆಗಳ ಸಮೇತ ಬಂದಿದ್ದಾನೆ. ಆದರೆ ಈ ವಿಡಿಯೋ ಅಲ್ಲಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಅಘೋರಿ ಬಾಬಾ ಎಲ್ಲಿಂದ ಬಂದಿದ್ದಾನೆ ? ಕುಂಭಮೇಳದಲ್ಲಿ ಇದು ನಿಜವಾಗಿ ನಡೆದಿದೆಯೇ..? ಎಂದು ಸಾಕಷ್ಟು ಕಾಮೆಂಟ್ಗಳು ಬರುತ್ತಿವೆ. ಆದರೆ ನಿಜವಾಗಲೂ ಆತ ಅಲ್ಲಿಗೆ ಬಂದಿದ್ದಾನಾ ಎಂಬುದು ಸ್ಪಷ್ಟವಾಗದಿದ್ದರೂ.. ಕುಂಭಮೇಳದಲ್ಲಿ ವಿಚಿತ್ರ ಅಘೋರಿಗಳು ಮತ್ತು ಸಾಧುಗಳು ವಿಶೇಷ ಆಕರ್ಷಣೆಯಾಗಿ ನಿಂತಿದ್ದಾರೆ.