
K2 ನ್ಯೂಸ್ ಡೆಸ್ಕ್ : ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಮಾಡಿ ಅದರ ಸಂಭ್ರಮವನ್ನು ಕಲ್ಯಾಣ ಕರ್ನಾಟಕ ಉತ್ಸವದ ಮೂಲಕ ಆಚರಿಸಲಾಗುತ್ತಿದೆ. ಕಲ್ಯಾಣ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಮೃತ ಕಾಲ ಶುರುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶಕ್ಕೆ ಅಮೃತ ಕಾಲ ಬಂದಂತೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಕೂಡಾ ಅಮೃತಕಾಲ ಬಂದಿದೆ. ಈ ಭಾಗಕ್ಕೆ ಸ್ವಲ್ಪ ತಡವಾಗಿ ಸ್ವಾತಂತ್ರ್ಯ ಬಂದಿದ್ದರು ಕೆಚ್ಚದೆಯ ಹೋರಾಟದಿಂದ ಎರಡೆರಡು ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಿದವರಾಗಿದ್ದಾರೆ. ರಮಾನಾಂದ ತೀರ್ಥರು ಸೇರಿದಂತೆ ಅಸಂಖ್ಯಾತ ಇಲ್ಲಿನ ಹೋರಾಟಗಾರರ ತ್ಯಾಗ, ಬಲಿದಾನ ಮಾಡಿದ ವೀರರಿಗೆ ವಿಶೇಷ ನಮನ ಸಲ್ಲಿಸುವುದಾಗಿ ಹೇಳಿದರು.
ಈ ಭಾಗ ಬಹಳ ವರ್ಷ ಹಿಂದುಳಿದಿತ್ತು. ಈ ಭಾಗದ ಸಮಗ್ರ ಅಭಿವೃದ್ದಿಗೆ ಸಂವಿಧಾನದ ಆರ್ಟಿಕಲ್ 371(ಜೆ) ಆಗಿರಲಿಲ್ಲ. ಆ ನಂತರ ತಿದ್ದುಪಡಿ ಆದರೂ ಕೂಡಾ ನಾಯಕತ್ವದಲ್ಲಿ ಇಚ್ಛಾ ಶಕ್ತಿ ಕೊರತೆಯಿಂದ ಈ ಭಾಗ ಅಭಿವೃದ್ದಿಯಾಗಿರಲಿಲ್ಲ. ಈ ಭಾಗದ ಯುವಕರಿಗೆ ಯಾವುದೇ ಕೆಲಸ ಮಾಡುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆ ಬೆಳೆಯುವ ಶಕ್ತಿ ಇದೆ. ಕಾರ್ಮಿಕರಿಗೆ ದುಡಿಯುವ ಶಕ್ತಿ ಇದೆ. ಈ ಭಾಗದಲ್ಲಿ ಸಂಪದ್ಭರಿತ ನೈಸರ್ಗಿಕ ಶಕ್ತಿ ಇದೆ. ಆದರೂ ಇಚ್ಛಾ ಶಕ್ತಿಯ ಕೊರತೆಯಿಂದ ಸುಮಾರು ವರ್ಷಗಳ ಕಾಲ ಹಿಂದುಳಿದಿತ್ತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರು ಹಿಂದುಳಿಯಲಿ ಎನ್ನುವ ಧೋರಣೆ ಈ ಭಾಗದ ಜನರ ಹಿಂದುಳಿಯುವಿಕೆಗೆ ಕಾರಣವಾಗಿತ್ತು. ಆದರೆ, ಈ ಭಾಗದಲ್ಲಿ ಮಂತ್ರಿ ಮಂಡಳ ಸಭೆ ನಡೆಸಿ ಅಭಿವೃದ್ದಿಗೆ ನಾಂದಿ ಹಾಡಿದವರು ಮಾಜಿ ಸಿಎಂ ಯಡಿಯೂರಪ್ಪನವರು. ಬೀದರ್-ಗುಲಬರ್ಗಾ ರೈಲ್ವೆ ಲೈನ್ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಅವರ ಕೊಡುಗೆಯಾಗಿದೆ ಎಂದ ಅವರು, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ. ಈಗ ನಾನು ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಲು ಮಂಡಳಿಗೆ ರೂ 3,000 ಕೋಟಿ ನೀಡುವುದಾಗಿ ಹೇಳಿ ಈ ಅನುದಾನದಲ್ಲಿ ಮ್ಯಾಕ್ರೋ ಮತ್ತು ಮೈಕ್ರೋ ಯೋಜನೆಯಡಿ ತಲಾ1500 ಕೋಟಿ ರೂ. ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವರ್ಷ 1,100 ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿವೆ. ಮುಂಬರುವ ವರ್ಷದಲ್ಲಿ ಇನ್ನೂ1,000 ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಡಿಗ್ರಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ, ನೀರಾವರಿ, ಕೌಶಲ ಅಭಿವೃದ್ದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ನೂತನ 28 ಹೊಸ ಪಿಎಚ್ ಸಿ ಹಾಗೂ 4 ಸಿಎಚ್ ಸಿಗಳನ್ನು ತೆರೆಯಲಾಗಿದೆ. ಕಲಬುರಗಿ ಜಯದೇವ ಆಸತ್ರೆ ಗೆ ರೂ.150 ಕೋಟಿ ಹಾಗೂ ಈ ಭಾಗದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಅನುಕೂಲವಾಗಲು ಬೆಂಗಳೂರಿನಲ್ಲಿ ರೂ 50 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
![]() |
![]() |
![]() |
![]() |
![]() |
[ays_poll id=3]