K2kannadanews.in
Accident News ಅರಕೇರ : ರಾಯಚೂರಿಗೆ ರೋಗಿಯನ್ನ ಬಿಟ್ಟು ವಾಪಸ್ ಅರಕೆರೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಒಂದಕ್ಕೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಚಾಲಕ ಮತ್ತು ಶುಶ್ರೂಷಕನಿಗೆ ಗಂಭೀರ ಗಾಯವಾದ ಘಟನೆ ಕ್ಯಾದಿಗೇರಾ ಕ್ರಾಸ್ ಬಳಿ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ಅರಕೆರ ತಾಲೂಕಿನ ಕ್ಯಾದಿಗೇರ ಗ್ರಾಮದ ಬಳಿ ಘಟನೆ ನಡೆದಿದೆ. ರಾಯಚೂರು ಆಸ್ಪತ್ರೆಗೆ ರೋಗಿಯನ್ನು ಬಿಟ್ಟು ವಾಪಸ್ ತೆರಳುತ್ತಿದ್ದ ವೇಳೆ ಅರಕೆರ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಂಬುಲೆಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಚಾಲಕ ವಿಜಯ್ ಕುಮಾರ್, ಶುಶ್ರೂಷಕ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರು ಗಾಯಾಳುಗಳನ್ನು ಅರಕೇರ ಆಸ್ಪತ್ರೆಗೆ ದಾಖಲಿಸಿದ್ದು , ಚಿಕಿತ್ಸೆ ನೀಡಲಾಗುತ್ತಿದೆ, ಇನ್ನು ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯು ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ನಡೆದಿದೆ.