K2kannadanews.in
Thunbhadra dam ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು (Broken) ಅಪಾರ (Harvey) ಪ್ರಮಾಣದಲ್ಲಿ ನೀರು (water) ಹರಿಯುತ್ತಿದೆ. ಈ ಘಟನೆಗೆ ನಿರ್ವಹಣೆಯೇ (Maintenance problem) ಸಮಸ್ಯೆಯಾಗಿದ್ದು, ಸಣ್ಣ (Small) ಸಮಸ್ಯೆ ಈಗ ದೊಡ್ಡದಾಗಿದೆ (Big) ಎಂದು ಟಿಬಿಬಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಹೇಳಿದ್ದಾರೆ.
ಹೌದು ಟಿಬಿಡ್ಯಾಂನ ವೈಕುಂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ಸರ್ವ ಏಜನ್ಸಿ (Expect agency) ಕಳೆದ ವರ್ಷ (Last year) ಭೇಟಿ ನೀಡಿ ಪರಿಶೀಲಿಸಿದ್ದರು. 70 ವರ್ಷದ ಹಳೇ ಗೇಟ್ (Old Gates) ಗಳು ಎನು ಆಗಲ್ಲ ಎಂದು ವರದಿ ನೀಡಿತು. ಪ್ರತಿ ವರ್ಷ ಜಲಾಶಯಕ್ಕೆ ಶೇ.75 ರಷ್ಟು ದುರಸ್ತಿ ಕಾರ್ಯ ನಡೆಯುತ್ತದೆ.
5 ವರ್ಷಕ್ಕೊಮ್ಮೆ ಸರ್ವೇ ನಡೆಯುತ್ತದೆ. ಈ ಬಾರಿಯೂ ನಿರ್ವಹಣೆ ಮಾಡಲಾಗಿದೆ. ಶೇ.50 ರಷ್ಟು ಜಲಾಶಯ ಖಾಲಿಯಾಗಲೇ ಬೇಕು. ಆಗ ಜಲಾಶಯದ ಗೇಟ್ ದುರಸ್ತಿ ಕಾರ್ಯ ನಡೆಯಲಿದೆ. ಇನ್ನೂ ಎರಡು ಮೂರು ದಿನಗಳ ವರೆಗೆ ನೀರು ಹೊರಗೆ ಹೋಗಲಿದೆ. ಜಲಾಶಯ ಪರಿಶೀಲನೆಗೆ ತಜ್ಞರ ತಂಡ ಇನ್ನೂ ಬರಬೇಕಿದೆ. ನಂತರ ದುರಸ್ತಿ ಕಾರ್ಯ ನಡೆದಿದೆ ಎಂದು ಹೇಳಿದರು.
ಈ ಒಂದು ಹೇಳಿಕೆಯಿಂದ ರೈತರಲ್ಲಿ ಆತಂಕ ಹೆಚ್ಚಿದೆ. ಮಳೆ ಬಂದು ಜಲಾಶಯ ಭರ್ತಿಯಾಗಿದೆ ನೀರು ಸಿಗುತ್ತದೆ ಎಂಬ ಸಂತಸದಿಂದ ಬೆಳೆ ನಾಟಿ ಮಾಡಿದ್ದರು. ಆದರೇ ಈ ಘಟನೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿಯುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಬಂದು ಜಲಾಶಯ ಭರ್ತಿ ಆಗದಿದ್ದರೇ ಎಂಬ ಆತಂಕ ಕಾಡುತ್ತಿದೆ.