This is the title of the web page
This is the title of the web page
Local News

ಜ.10 ರಿಂದ 12 ವರೆಗೆ ಕೃಷಿ ಮೇಳ ಆಯೊಜನೆ


ರಾಯಚೂರು : ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ 10,11 ಮತ್ತು 12ರಂದು ಮೂರು ದಿನಗಳ ಕೃಷಿಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ ಹೇಳಿದರು.

ವಿಶ್ವಸಂಸ್ಥೆಯು 2023 ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಹಿನ್ನೆಲೆ ಹಾಗೂ ನಮ್ಮ ಪೂರ್ವಜರು ನಮ್ಮ ಆಹಾರ ಪದ್ಧತಿಯಲ್ಲಿ ಸದೃಢ ಮತ್ತು ಪೌಷ್ಠಿಕತೆಯುಳ್ಳ ಸಿರಿಧಾನ್ಯಗಳ ಸಮರ್ಪಕ ಬಳಕೆಯ ಬಗ್ಗೆ ಪ್ರೇರಣೆ ನೀಡುವ ಸನ್ನಾಹದಲ್ಲಿದೆ. ಇಂದಿನ ವೈವಿಧ್ಯತೆಯ ಕೊರತೆಯ ಆಹಾರದ ಜೀವನ ಶೈಲಿಗೆ ಅಂಟಿಕೊಂಡು ಹಲವಾರು ರೋಗ-ರುಜಿನಗಳನ್ನು ಈಗಾಗಲೇ ಆಹ್ವಾನಿಸಿದ್ದೇವೆ. ಆದರೀಗ ಅದನ್ನು ಮರೆತಿದ್ದು ಧಾನ್ಯಗಳನ್ನು ಪುನಃ ಬಳಸುವ ಪರಿಸ್ಥಿತಿ ಬಂದೊದಗಿದೆ.

ಈ ಗುರುತರ ಬದಲಾವಣೆಗೆ ಪೂರಕಚಿಂತನೆಯ ಪರಿಸ್ಥಿತಿಗಳನ್ನು ರೈತಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಒದಗಿಸಿ ಸಿರಿಧಾನ್ಯಗಳನ್ನು ನಮ್ಮ ಆಹಾರ ಕ್ರಮಗಳಲ್ಲಿ ಯೋಗ್ಯವಾಗಿ ಬಳಸುವ ಉದ್ದೇಶ ಸಾಧನೆಗೆ ಸಿರಿಧಾನ್ಯಗಳ ಸಾರ ಜೀವನಕ್ಕೆ ಆಧಾರ ಘೋಷವಾಕ್ಯದಡಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದರು. ಇದರೊಂದಿಗೆ,ಈ ಮೂರು ದಿನಗಳಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಗಳ ಕುರಿತು ರೈತಬಾಂಧವರಿಗೆ ಸಂಪೂರ್ಣ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಒದಗಿಸುವದರ ಜೊತೆಗೆ ತಮ್ಮ ಜಮೀನಿನಲ್ಲಿ ಅಳವಡಿಸಲು ಪ್ರೇರೇಪಣೆಯ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.

 


[ays_poll id=3]