“ಏಜೆಂಟ್​​ 001” ಶನಿವಾರದಿಂದ ನ್ಯೂಸ್​ಫಸ್ಟ್​ನಲ್ಲಿ ವಿಶೇಷ ಕಾರ್ಯಕ್ರಮ..

K 2 Kannada News
“ಏಜೆಂಟ್​​ 001” ಶನಿವಾರದಿಂದ ನ್ಯೂಸ್​ಫಸ್ಟ್​ನಲ್ಲಿ ವಿಶೇಷ ಕಾರ್ಯಕ್ರಮ..
WhatsApp Group Join Now
Telegram Group Join Now

K2kannadanews.in

special program : ಇವತ್ತು ನಾವು ನೀವು ಸುರಕ್ಷಿತವಾಗಿ ಇದ್ದೀವಿ ಅಂದ್ರೆ ನಮಗೋಸ್ಕರ ಮತ್ಯಾರೋ ತಮ್ಮ ಪ್ರಾಣವನ್ನ ಒತ್ತೆಯಿಟ್ಟು ಹೋರಾಡ್ತಿದ್ದಾರೆ. ಗಡಿಯಲ್ಲಿ ನಿಂತು ಸಾವಿನ ಜೊತೆ ಸರಸ ಆಡ್ತಿದ್ದಾರೆ. ಸಮವಸ್ತ್ರದಲ್ಲಿ ಹೋರಾಡ್ತಿರೋ ಯೋಧರು ಒಂದು ಕಡೆಯಾದ್ರೆ, ತಾವು ಯಾರು ಅನ್ನೋದನ್ನ ಜಗತ್ತಿಗೂ ಹೇಳದೇ ತಮ್ಮ ಕುಟುಂಬದವರಿಗೂ ಗೊತ್ತಿಲ್ಲದೇ ಹೋರಾಡ್ತಿರೋರು ಮತ್ತೊಂದು ಕಡೆ.ಬಹುಟ್ಟ ಊರು ಬಿಟ್ಟು ಬೇಱವುದೋ ದೇಶದಲ್ಲಿ ಗೂಡಚಾರಿಗಳಾಗಿ ಕೆಲಸ ಮಾಡ್ತಾ ದೇಶ ಸೇವೆ ಮಾಡ್ತಿದ್ದಾರೆ. ಪ್ರತಿಕ್ಷಣವೂ ಚಾಲೆಂಜ್​ ಆಗಿರುವಂತಹ ಸನ್ನಿವೇಶದಲ್ಲೇ ಬದುಕಿದ ಸೀಕ್ರೆಟ್​ ಏಜೆಂಟ್​​ಗಳ ಕುರಿತ ವಿಶೇಷ ಸೀರೀಸ್​ ಶನಿವಾರದಿಂದ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಲಿದೆ.

ಹೌದು ಅದುವೇ “ಏಜೆಂಟ್​​ 001” ಹೆಸರಿನ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ಕಾರ್ಯಕ್ರಮ ಇದಾಗಿದೆ.
ಹಲವು ಪುಸ್ತಕಗಳು ಹಾಗೂ ದಾಖಲೆಗಳನ್ನು ಅಧ್ಯಯನ ಮಾಡಿ ನಿಖರ ಮಾಹಿತಿ ಸಂಗ್ರಹಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅತ್ಯುತ್ತಮ ಗುಣಮಟ್ಟದಿಂದ ಕಾರ್ಯಕ್ರಮ ನಿರ್ಮಾಣ ಮಾಡಲಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ವಿಷಯಗಳನ್ನು ಇದು ಒಳಗೊಂಡಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ವಿಷಯಗಳನ್ನ ತಿಳಿಸಿಕೊಡುವ ನಿಟ್ಟಿನಲ್ಲಿ ಇದನ್ನ ರೂಪಿಸಲಾಗಿದೆ.

ಇದಕ್ಕೂ ಮೊದಲು ಚುನಾವಣಾ ಸಂದರ್ಭದಲ್ಲಿ ದಿ ಲೀಡರ್​ ಎಂಬ ವಿಶೇಷ ಕಾರ್ಯಕ್ರಮ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಿತ್ತು. ದೇಶ ಕಟ್ಟಿದ್ದ ಪ್ರಧಾನಮಂತ್ರಿಗಳು ಅವರು ಎದುರಿಸಿದ ಸವಾಲುಗಳು ಅವರು ಮಾಡಿದ ಸಾಧನೆ ಕುರಿತ ಲೀಡರ್​ ಕಾರ್ಯಕ್ರಮಕ್ಕೆ ರಾಜ್ಯದ ಜನರಿಂದ ಅಭೂತಪೂರ್ವ ಯಶಸ್ಸು ದೊರೆತಿತ್ತು. ನ್ಯೂಸ್​ಫಸ್ಟ್​​ನ ಎಂಡಿ ಹಾಗೂ ಸಿಇಒ ಆಗಿರುವ ಎಸ್.ರವಿಕುಮಾರ್​ ​ ಅವರು ಲೀಡರ್​ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಸದ್ಯ ಏಜೆಂಟ್​ 001 ಕಾರ್ಯಕ್ರಮವನ್ನ ಸಹ ಅವರೇ ನಿರೂಪಣೆ ಮಾಡುತ್ತಿದ್ದಾರೆ. ​

WhatsApp Group Join Now
Telegram Group Join Now
Share This Article