24 ಗಂಟೆ ನಂತರ ಬಾಲಕಿ ಶವ ಪತ್ತೆ, ಬಾಲಕನಿಗಾಗಿ ಮುಂದುವರೆದ ಶೋಧಕಾರ್ಯ.

K 2 Kannada News
24 ಗಂಟೆ ನಂತರ ಬಾಲಕಿ ಶವ ಪತ್ತೆ, ಬಾಲಕನಿಗಾಗಿ ಮುಂದುವರೆದ ಶೋಧಕಾರ್ಯ.
Oplus_16908288
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಪಂಚಮುಖಿ ಬಳಿಯ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ಪ್ರಕರಣಕ್ಕೆ ಸಂಬಂದಿಸಿದಂತೆ 24 ಗಂಟೆ ನಂತರ ಓರ್ವ ಬಾಲಕಿ ಶವ ಪತ್ತೆಯಾಗಿದೆ.

ಹೌದು ರಾಯಚೂರು ತಾಲ್ಲೂಕಿನ ಪಂಚಮುಖಿ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ಮಕ್ಕಳು ಕಾಲುವೆಯಲ್ಲಿ ನಾಪತ್ತೆಯಾಗಿದ್ದರು. ಗದ್ವಾಲ್ ಮೂಲದ ಕುಟುಂಬವೊಂದು ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಜಾತ್ರೆ ನಿಮಿತ್ಯ ಆಗಮಿಸಿದ್ದರು. ತಂದೆ ಮಕ್ಕಳನ್ನ ಕರೆದುಕೊಂಡು ಪಕ್ಕದ ಕಾಲುವೆ ಬಳಿ ಬಂದಿದಾಗ ಕುಡಿದು ಕಾಲುವೆ ಪಕ್ಕ ಮಲಗಿದ್ದ. ಮಕ್ಕಳು ಕಾಲುವೆಗೆ ಆಟವಾಡಲು ನೀರಿಗೆ ಇಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಗದ್ವಾಲ್ ಮೂಲದ ಅಂಜಲಿ (14) ಮತ್ತು ಸಹೋದರ ವೆಂಕಟೇಶ(13) ಕೊಚ್ಚಿ ಹೊಗಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗ್ರಾಮಸ್ಥರೊಂದಿಗೆ ಶೋಧಕಾರ್ಯ ನಡೆಸಿದ್ದರು.

24 ಗಂಟೆಗಳ ನಂತರ ಬಾಲಕಿ ಅಂಜಲಿ ಶವ ಪತ್ತೆಯಾಗಿದೆ. ಬುಡದಿನ್ನಿ ಗ್ರಾಮದ ಬಳಿ ಬಾಲಕಿ ಶವ ಕಾಲುವೆಯಲ್ಲಿ ತೆಲಿ ಬರುತ್ತಿರುವುದು ನೋಡಿದ ಗ್ರಾಮಸ್ಥರು ಹೊರತೆಗೆದಿದ್ದಾರೆ. ಇತ್ತ ಬಾಲಕನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article